ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧನೆ

ಚಾಮರಾಜನಗರ, ಏ.12:- 2023ರ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ದೊರೆರಾಜು ಮತದಾರರಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ನಗರದ ಹೊರವಲಯದÀ ಉತ್ತುವಳ್ಳಿಯಲ್ಲಿರುವ ಗಿರೀಶ್ ಎಕ್ಸ್‍ಪೋರ್ಟ್ ಹಾಗೂ ಗೃಹತಾರೆ ಹ್ಯಾಂಡ್‍ಲೂಮ್ಸ್ ಸೆಕ್ಟರ್ ಮತ್ತು ಬದ£ಗುಪ್ಪೆ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ಹಾಗು ಪುರುಷ ಕಾರ್ಮಿಕರನ್ನು ಸಂಘಟನೆ ಮಾಡಿ, ಮೇ 10 ರಂದು ತಪ್ಪದೇ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು. ಈ ದಿನ ತಾವು ಮತದಾನ ಮಾಡಲು ವೇತನ ಸಹಿತ ರಜೆಯನ್ನು ಕಂಪನಿಗಳು ನೀಡಬೇಕು. ಮತದಾನ ಕಡ್ಡಾಯವಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಮತದಾನದ ಮಹತ್ವವನ್ನು ದೊರೆರಾಜು ತಿಳಿಸಿಕೊಟ್ಟರು.
ಬಳಿಕ ಪ್ರತಿಜ್ಞಾ ವಿಧಿಯನ್ನು ಬೋದಿಸಿ, ನಿಭೀತರಾಗಿ, ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸಬೇಕೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆಯ ಉತ್ತೇಜನಾಧಿಕಾರಿ ಹಾಗೂ ಜವಳಿ ಪ್ರವರ್ತ ಲಕ್ಷ್ಮಿಪತಿ, ಕುಮಾರ್, ಲೋಕನಾಥ್ ಇದ್ದರು.