ಕೈಗಾರಿಕಾ ಪ್ರದೇಶಗಳಲ್ಲಿ ಮತದಾನ ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಬಳ್ಳಾರಿ, ಏ. 20: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ `ಮತದಾನ ಜಾಗೃತಿ ಜಾಥಾ’ ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಶುಕ್ರವಾರ ಸಂಚಾರ ಮಾಡಿ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸಿಬ್ಬಂದಿಗೆ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಬಿ. ಸೋಮಶೇಖರ್, ಕೆಐಡಿಬಿ ಅಭಿವೃದ್ಧಿ ಅಧಿಕಾರಿಗಳಾದ ಗೋವಿಂದ ನಾಯಕ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷರಾದ ಎನ್. ಯಶವಂತರಾಜ್ ನಾಗಿರೆಡ್ಡಿ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ ಹಾಗೂ ಕೆಎಸ್‌ಎಸ್‌ಐಡಿಸಿ ನೇತೃತ್ವದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಮೇ ೭ ರ ಮಂಗಳವಾರ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಢಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಕೋರಲಾಯಿತು.
ಬಳ್ಳಾರಿಯ ಇಂಡಸ್ಟ್ರಿಯಲ್ ಏರಿಯಾದ ಮೊದಲನೇ ಸ್ಟೇಜ್, ಸೀಡ್ಸ್ ಕಾರ್ಪೊರೇಷನ್‌ನಿಂದ ಶುಕ್ರವಾರ ಪ್ರಾರಂಭವಾದ `ಮತದಾನ ಜಾಗೃತಿ ಜಾಥಾ’ ಮೊದಲನೆಯ ಹಂತ, ಎರಡನೆಯ ಹಂತ ಮತ್ತು ಹಲಕುಂದಿ ಪ್ರದೇಶದ ಇಂಡಸ್ಟ್ರೀಯಲ್ ಏರಿಯಾದ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿ ಎಪಿಎಂಸಿಯಲ್ಲಿ ಸಮಾರೋಪಗೊಂಡಿತು.
ಈ ಜಾಥಾದಲ್ಲಿ ಸೀಡ್ಸ್ ಅಸೋಸಿಯೇಷನ್‌ನ ಬಿ.ವಿ. ಬದ್ರಿನಾಥ್, ಕಾಟನ್ ಅಸೋಸಿಯೇಷನ್ ನ ಮುಖಂಡರಾದ ದೊಡ್ಡಬಸವನಗೌಡ, ರೈಸ್ ಮಿಲ್ ಅಸೋಸಿಯೇಷನ್  ನ ಮುಖಂಡರಾದ ಶ್ರೀಧರ್, ಇಂಡಸ್ಟಿçಯಲ್ ಏರಿಯಾ ಅಸೋಸಿಯೇಷನ್ ಮುಖಂಡರಾದ ಕೆ.ಎಂ. ಶಿವಮೂರ್ತಿ, ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ ಮುಖಂಡರಾದ ಬಿ. ಸತ್ಯಬಾಬು ಮತ್ತು ಅಂಕಾರಾವ್, ಸ್ಪಾಂಜ್ ಐರನ್ ಅಸೋಸಿಯೇಷನ್‌ನ ಮುಖಂಡರು, ಚೇರ್ಮೆನ್, ಸಿಎಸ್‌ಆರ್ ಕಮಿಟಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಟಿ. ಶ್ರೀನಿವಾಸರಾವ್ (ವಾಸು), ಎಪಿಎಂಸಿ ದಲ್ಲಾಲಿ ವರ್ತಕರ ಸಂಘದ ಡಿ. ವೀರೇಶ್, ಚೇರ್ಮೆನ್, ರೈತಣ್ಣನ ಊಟ ಕಮಿಟಿಯ ಯು. ಗೋವಿಂದರೆಡ್ಡಿ, ಎಂ. ಗುರುಸ್ವಾಮಿ, ಕೆ. ನಾಗೇಶ್, ಆಸ್ಪತ್ರೆ ಕಮಿಟಿ ಚೇರ್ಮೆನ್ ಬಿ. ಸುರೇಂದ್ರ ಕುಮಾರ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಿಶೇಷ ಆಹ್ವಾನಿತರಾದ ಎಂ. ಶೇಷರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.