ಕೈಗಾರಿಕಾ ಕ್ಷೇತ್ರಕ್ಕೆ ಪರಿಹಾರ: ಸಿಎಂ ಜೊತೆ ಚರ್ಚಿಸಿ‌ ನಿರ್ಧಾರ: ಶೆಟ್ಟರ್ ಭರವಸೆ

ಬೆಂಗಳೂರು ಜೂ.1- ಕೋವಿಡ್‌ ಎರಡನೇ ಅಲೆಯ ಕಾರಣ ತೊಂದರೆಗೀಡಾಗಿರುವ ರಾಜ್ಯದ ಕೈಗಾರಿಕಾ ಕ್ಷೇತ್ರದ ಸಮಸ್ಯೆಗಳಿಗೆ ಅಗತ್ಯವಿರುವ ಪರಿಹಾರದ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದ್ದಾರೆ

ಕೋವಿಡ್‌ ಎರಡನೇ ಅಲೆಯು ರಾಜ್ಯದ ಕೈಗಾರಿಕಾ ಕ್ಷೇತ್ರ ಅನೇಕ ಸವಾಲು ಎದುರಿಸುತ್ತಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ನಿರ್ದಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೈಗಾರಿಕಾ ಸಂಘಟನೆಗಳಾದ ಕಾಸಿಯಾ, ಎಫ್‌ಐಸಿಸಿಐ ಮತ್ತು ಎಫ್‌ಕೆಸಿಸಿಐ ನ ಅಧ್ಯಕ್ಷರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು ಕೈಗಾರಿಕಾ ಕ್ಷೇತ್ರದ ಮತ್ತೆ ತನ್ನ ಸಂಪೂರ್ಣ ಕಾರ್ಯಾಚರಣೆ ನಡೆಸಲು ಲಾಕ್‌ಡೌನ್‌ ನಂತರವೂ ಸಾಕಷ್ಟು ಸಮಯ ಬೇಕು ಎಂದರು.

ರಿಯಾಯಿತಿ ಗೆ ಮನವಿ:

ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುವ ಈ ಉದ್ಯಮಗಳು ಲಾಕ್‌ಡೌನ್‌ ನಿಂದಾಗಿ ತೀವ್ರ ತೊಂದರೆಗೆ ಈಡಾಗಿವೆ ಎಂದು ಅವರು ತಿಳಿಸಿದರು

ಲಾಕ್ ಡೌನ್ ಹಿ್ಙನ್ನೆಲೆಯಲ್ಲಿ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳು ನಮ್ಮ ಗಮನ ಸೆಳೆದಿದ್ದಾರೆ. ಅಲ್ಲದೆ, ವಿದ್ಯುತ್‌, ತೆರಿಗೆ ಸೇರಿದಂತೆ ಕೆಲವು ರಿಯಾಯತಿಗಳನ್ನು ಕೇಳಿದ್ದಾರೆ‌ ಈ ಎಲ್ಲಾ ವಿಷಯಗಳ ಕುರಿತು ಸಮಾಲೋಚನೆ ನಡೆಸಿದ ಬಳಿಕ ಮುಂದೆ ಯಾವ ರೀತಿ ನೆರವು ನೀಡಬೇಕು ಎನ್ನುವ ಕುರಿತು ನಿರ್ದಾರ ಕೈಗೊಳ್ಳಲಾಗುವುದು ಎಂದರು.

ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ನೀಡಿರುವ ಈ ಮನವಿಯ ಬಗ್ಗೆ ಸ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಅಗತ್ಯ ತೀರ್ಮಾನಗಳನ್ನು ತಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಫ್‌ಐಸಿಸಿಐ ಕರ್ನಾಟಕ ಅಧ್ಯಕ್ಷ ಉಲ್ಲಾಸ್‌ ಕಾಮತ್‌, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಾಲ್‌ ಎಂ ಸುಂದರಮ್‌, ಕಾಸಿಯಾ ಅಧ್ಯಕ್ಷ ಕೆ ಬಿ ಅರಸಪ್ಪ ಉಪಸ್ಥಿತರಿದ್ದರು. ಕೈಗಾರಿಕಾ ಸಂಘ ಸಂಸ್ಥೆಗಳ ಪರವಾಗಿ ಇದೇ ಸಂಧರ್ಭದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.