ಕೈಗಾರಿಕಾ ಕಂಪನಿಗಳು ಆಕ್ಸಿಜನ್ ಆಸ್ಪತ್ರೆಗಳನ್ನು ತೆರೆಯಲು ಆಗ್ರಹ

ಕೊಪ್ಪಳ ಮೇ 16 : ಕೊಪ್ಪಳ ಜಿಲ್ಲೆಯ ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಸರ್ಕಾರ ಶ್ರಮಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕಾ ಕಂಪನಿಗಳು ಜನರ ಆರೋಗ್ಯ ರಕ್ಷಣೆಗೆ ಸಹಕರಿಸದಿರುವದು ವಿಷಾದನೀಯ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ಹೇಳಿದ್ದಾರೆ.
ಕೂಡಲೇ ಕೈಗಾರಿಕಾ ಕಂಪನಿಗಳು ಆಕ್ಸಿಜನ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಅವರು ಒತ್ತಾಯಿಸಿದ್ದಾರೆ.