(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜೂ30: ತಾಲೂಕಿನ ಹರದಗಟ್ಟಿ ಸಂರಕ್ಷಿತ ಕುರುಚಲು ಅರಣ್ಯ ಪ್ರದೇಶದಲ್ಲಿ ಕೈಕೊಟ್ಟ ಮಳೆಯಿಂದಾಗಿ ಅರಣ್ಯದ ಮಧ್ಯ ಭಾಗದಲ್ಲಿರುವ ಕೆರೆಗಳಲ್ಲಿ ನೀರು ಇಲ್ಲದಿರುವುದು ಪಶು ಪಕ್ಷಿ ಪ್ರಾಣಿ ಸಂಕುಲಕ್ಕೆ ಕುತ್ತು ಬಂದಿದೆ.
ಸುಮಾರು 93 ಹೆಕ್ಟೇರ್ ಅರಣ್ಯ ಪ್ರದೇಶ ವಿದ್ದು ಈ ಕುರುಚಲು ಅರಣ್ಯ ಪ್ರದೇಶದಲ್ಲಿ ಅಡರಕಟ್ಟಿ ಗ್ರಾಮ ಪಂಚಾಯತಿಯವರು ಸುಮಾರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಅಡಿ ಕೆರೆಗಳನ್ನು ನಿರ್ಮಿಸಿದ್ದು ಯಾವ ಕೆರೆಗಳಲ್ಲೂ ಹನಿ ನೀರು ಇಲ್ಲ.
ಈ ಅರಣ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನವಿಲು, ನರಿ ತೋಳ, ಚಿಗ,ರೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳಿದ್ದು ನೀರು ಇಲ್ಲದ್ದರಿಂದ ನೀರು ಅರಸಿ ನಾಡಿಗೆ ಬರುವ ಆತಂಕ ಎದುರಾಗಿದೆ.
ಆದ್ದರಿಂದ ಅರಣ್ಯ ಇಲಾಖೆಯವರು ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಕೆರೆಗಳಲ್ಲಿ ಅನಿವಾರ್ಯವಾಗಿ ನೀರು ತುಂಬಿಸುವ ಸಿಮೆಂಟ್ ನ ತೊಟ್ಟೆಗಳನ್ನುಟ್ಟು ನೀರು ಸಂಗ್ರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.