ಕೈಕೊಟ್ಟ ಬಸ್ : ತಪ್ಪಿದ ಅವಘಡ

ಹಟ್ಟಿ,ಜು.೦೬-
ಲಿಂಗಸುಗೂರಿನಿಂದ ಹಟ್ಟಿ ಮಾರ್ಗವಾಗಿ ಹೊರಟಿದ್ದ ಬಸ್ಸೊಂದರ ಆಕ್ಸ್‌ಲ್ ಕತ್ತರಿಸಿದ್ದು, ಕಂದಕದಲ್ಲಿ ಬಸ್ ಉರುಳುವ ಭಾರಿ ಅನಾಹುತದಿಂದ ಪಾರಾಗಿದ್ದು, ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ.
ಕೆಎ-೩೬, ಎಫ್-೧೦೫೮ ನಂಬರಿನ ಲಿಂಗಸುಗೂರು ಘಟಕದ ಪ್ರಯಾಣಿಕರನ್ನು ತುಂಬಿಕೊಂಡು ಹೊರಟ ಸಾರಿಗೆ ಬಸ್ಸು ಚಾಲನೆಯಲ್ಲಿದ್ದಾಗ ಏಕಾ-ಏಕಿ ಆಕ್ಸ್‌ಲ್ ಕತ್ತಿರಿಸಿದ ಪರೀಣಾಮ, ನಿಧಾನವಾಗಿ ಚಲಿಸುತ್ತಿರುವ ಬಸ್ಸನ್ನು ಚಾಲಕ ಸಮಯೋಚಿತವಾಗಿ ನಿಯಂತ್ರಣ ಮಾಡಿದ್ದರಿಂದ ಭಾರಿ ಅನಾಹುತ ತಪ್ಪಿ, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಅದೃಷ್ಟವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲವೆಂದು ಚಾಲಕ ಹೇಳುತ್ತಾರೆ.