ಕೇಸರ ಜವಳಗಾ ಶ್ರೀ ಜಡಿಬಸವಲಿಂಗ ಶ್ರೀ ಪುಣ್ಯರಾಧನೆಗೆ ಚಾಲನೆ

ಆಳಂದ:ಜ.14: ನೆರೆಯ ಕೇಸರ ಜವಳಗಾ ಗ್ರಾಮದ ಐತಿಹಾಸಿಕ ವಿರಕ್ತ ಮಠದ ಲಿಂ. ಶ್ರೀ ಜಡಿಬಸವಲಿಂಗೇಶ್ವರ ಮಹಾಸ್ವಾಮೀಜಿ 6ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಪೀಠಾಧಿಪತಿ ವೀರಂತೇಶ್ವರ ಮಹಾಸ್ವಾಮೀಜಿ ಅವರು ಜ.11ರಿಂದ15ರ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀ ವೀರಂತೇಶ್ವರ ಶ್ರೀಗಳು, ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿನಾಡಿನಲ್ಲಿ ಕೇಸರ ಜವಳಗಾ ಶ್ರೀಮಠವು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿ ಸನ್ಮಾರ್ಗ ತೋರಿ ಬದುಕು ಕಸಾನಾಗಿತ್ತಾ ಬಂದಿದೆ. ಲಿಂ. ಜಡಿಬಸವಲಿಂಗೇಶ್ವರ ಶ್ರೀಗಳ ಸಮಾಜೋ ಧಾರ್ಮಿಕ ಕಾರ್ಯಗಳು ಇಂದಿಗೂ ಮಾದರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠದ ಕಾರ್ಯಗಳು ಮುಂದುವರೆಯುತ್ತಿವೆ. ಭಕ್ತರು ಇಂಥ ಪುಣ್ಯದ ಕಾರ್ಯಗಳಲ್ಲಿ ಭಾಗವಹಿಸಿ ಬದುಕು ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಿತ್ಯ ಸಂಜೆ ತೀರ್ಥ ಗ್ರಾಮದ ಸೋಮೇಶ್ವರ ಮಠದ ಬಸವರಾಜ ಆರ್. ಹಿರೇಮಠ ಪ್ರವಚನ ನಡೆಸಿಕೊಟ್ಟರು. ಸಂಗೀತ ಕಲಾವಿದರು ಭಕ್ತರು ಈ ಸಂದರ್ಭಧಲ್ಲಿ ಭಾಗವಹಿಸಿದ್ದರು.

ಜ.14ರಂದು ನಡೆಯುವ ಧರ್ಮ ಸಭೆಯನ್ನು ಮುರುಮ ಟೆಂಗಿನ ಮಠದ ಚನ್ನಮಲ್ಲ ಶಿವಾಚಾರ್ಯರು ಉದ್ಘಾಟಿಸುವರು. ನಂದಗಾಂವ ವಿರಕ್ತ ಮಠದ ಶ್ರೀ ರಾಜಶೇಖರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ಹಾಗೂ ಹಿರೇನಾಗಾಂವದ ಜಯಶಾಂತಲಿಂಗೇಶ್ವರ ಮಹಾಸ್ವಾಮೀಜಿ, ಅಣದೂರದ ಶ್ರೀ ಶಿವಯೋಗಿ ಶಿವಾಚಾರ್ಯರು, ಪಡಸಾವಳಿ ಉದಗಿರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ನಳದುರ್ಗ ಉಪ್ಪಿನಬೆಟ್ಟಗೇರಿ ಮಠದ ಬಸವರಾಜ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಅಕ್ಕಲಕೋಟ, ಅಚಲೇರ, ಹೋದಲೂರ, ಮಾದನಹಿಪ್ಪರಗಾ, ಬಬಲಾದ, ನರೋಣಾ, ಚಾಂಬಾಳ, ಆಳಂದ, ಜವಳಿ, ಬಂಗರಗಾ ಮಠಗಳ ಶ್ರೀಗಳು ಆಗಮಿಸುವರು.

ಜ.15ರಂದು ಬೆಳಗಿನ ಜಾವ ಶ್ರೀಮಠದಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಕುಂಭ, ಕಳಸದೊಂದಿಗೆ ಮಧ್ಯಾಹ್ನ 2:00ಗಂಟೆಗೆ ಶ್ರೀ ವೀರಂತೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಲಿಂ. ಜಡಿಬಸವಲಿಂಗೇಶ್ವರ ಶ್ರೀಗಳ ಭಾವಚಿತ್ರ ಪಲ್ಲಕ್ಕಿ ಮೂಲಕ ಭವ್ಯ ಮೆರವಣಿಗೆ ಸಾಗಿ ಧಾರ್ಮಿಕ ಸಮಾರಂಭ ನಡೆಯಲಿದೆ. ರಾತ್ರಿ 9:00ಗಂಟೆಗೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ದರ್ಶನಾಶೀವಾರ್ದ ಪಡೆಯಬೇಕು ಎಂದು ಭಕ್ತಮಂಡಳಿ ಕೋರಿದೆ.