ಕೇಸರಿ ಪೇಡಾ

ಬೇಕಾಗುವ ಸಾಮಗ್ರಿಗಳು
ಒಂದು ಲೀಟರ್ ಹಾಲು
ನೂರು ಗ್ರಾಂ ಸಕ್ಕರೆ
ಏಲಕ್ಕಿ ಪುಡಿ
ಕೇಸರಿ, ಪಿಸ್ತಾ ಸ್ವಲ್ಪ
ಕೇಸರಿ ಪೇಡಾ ಮಾಡುವ ವಿಧಾನ
ಹಾಲನ್ನು ಕುದಿಸಿ, ನಂತರ ಸಿಮ್‌ನಲ್ಲಿಟ್ಟು ತುಂಬಾ ಹೊತ್ತು ಕುದಿಸಿ, ಹಾಲು ಗಟ್ಟಿಯಾಗಲಿ, ಆದರೆ ಹೀಗೆ ಕುದಿಸುವಾಗ ಆಗಾಗ ತಿರುಗಿಸುತ್ತಲೇ ಇರಿ. ಹಾಲು ಗಟ್ಟಿಯಾದಾಗ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಈಗ ಕೇಸರಿ ಹಾಕಿ, ಕೇಸರಿ ಹಾಕಿದಾಗ ಹಾಲು ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಿಶ್ರಣ ಗಟ್ಟಿಯಾದಾಗ ಉರಿ ಆಫ್‌ ಮಾಡಿ. ಈಗ ಮಿಶ್ರಣವನ್ನು ಕೈಯಿಂದ ಕಲೆಸಿ ನಂತರ ತಣ್ಣಗಾಗಲು ಬಿಡಿ. ಈಗ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ನಂತರ ಮೆಲ್ಲನೆ ಪ್ರೆಸ್ ಮಾಡಿ, ಅದರ ಮೇಲೆ ಪಿಸ್ತಾ ಉದುರಿಸಿ. ಇಷ್ಟು ಮಾಡಿದರೆ ಕೇಸರಿ ಪೇಡಾ ಸವಿಯಲು ರೆಡಿ. ಇದನ್ನು ಕೋವಾ ಹಾಕಿ ಮಾಡುವುದಾದರೆ ಇನ್ನು ಸುಲಭ, ಅಲ್ಲದೆ ಹಾಲು ಒಂದು ಚಮಚ ಸಾಕು.