ಕೇಸರಿಯಾಗುತ್ತಿರುವ  ಗಣಿನಾಡು
ಸಿದ್ದತೆಯಲ್ಲಿ ಪ್ರಮುಖರ ಸಭೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.16: ಈ ತಿಂಗಳ 20 ರಂದು ನಗರದಲ್ಲಿ ನಡೆಯುವ ಬಿಜೆಪಿ ಎಸ್ಟಿ ವಿರಾಟ್ ಸಮಾವೇಶಕ್ಕೆ ಗಣಿನಾಡು ಬಳ್ಳಾರಿ ನಗರ ಬಿಜೆಪಿ ಬಾವುಟ, ಬ್ಯಾನರ್ ಗಳಿಂದ ಕೇಸರೀಕರಣ ನಡೆದಿದ್ದರೆ. ಮತ್ತೊಂದು ಕಡೆ
ಸಮಾವೇಶ ನಡೆಯುವ
ಬಳ್ಳಾರಿ, ವಿಜಯನಗರ ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳ ಪ್ರಮುಖರ ಸಭೆ ಪರಿಶಿಷ್ಟ ವರ್ಗಗಳ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಸಿದ್ದತಾ ಸಭೆ ನಡೆಯಿತು.
ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ನಿರ್ಮಲಕುಮಾರ್ ಸುರಾನ, ಅಶ್ವತ್ ನಾರಾಯಣ, ತಿಪ್ಪರಾಜ್, ಸಿದ್ದರಾಜು. ನವೀನ್, ಅಮರನಾಥ್ ಪಾಟೀಲ್, ವಿರೂಪಾಕ್ಷಪ್ಪ, ಪ್ರತಾಪ್ ಸಿಂಹ್, ಒ್ರಭುದೇವ್ ಕಪ್ಪಗಲ್, ಗಂಗಾಧರ  ಕೇಶವ ಪ್ರಸಾದ್, ಸಿದ್ದೇಶ್ ಯಾದವ್, ಸೋಮಶೇಖರ ರೆಡ್ಡಿ,  ಗುತ್ತಿಗನೂರು ವಿರೂಪಾಕ್ಷಗೌಡ, ಗೋನಾಳ್ ಮುರಹರಗೌಡ, ಶಿವಶಂಕರರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
ಸಮಾವೇಶದ ಹಿನ್ನಲೆಯಲ್ಲಿ ನಗರದ ರಸ್ತೆಗಳು, ವೃತ್ತಗಳಲ್ಲಿ ಬಿಜೆಪಿ ಬಾವುಟಗಳನ್ನು ಕಟ್ಟುವ, ನೆಡುವ ಕಾರ್ಯ ಭರದಿಂದ ನಡೆದಿದೆ.
ಈ ಸಮಾವೇಶದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಮುಖ್ಯ ಮಂತ್ರಿ ಬಸಬರಾಜ್  ಬೊಮ್ಮಾಯಿ ಸೇರಿದಂತೆ ಅನೇಮಕ ಮುಖಂಡರು  ಸಚಿವರು  ಪಾಲ್ಗೊಳ್ಳಲಿದ್ದಾರೆ.
ಸಮಾವೇಶದ ಸಿದ್ದತೆಗಾಗಿ
ಪಕ್ಷದ 41 ತಂಡಗಳು, ಮೂರು ಸಾವಿರ ಕಾರ್ಯಕರ್ತರು ಸಿದ್ದತೆಯಲ್ಲಿ  ತೊಡಗಿದ್ದಾರೆ.
ಈ ಸಮಾವೇಶ ಬಳ್ಳಾರಿಯಲ್ಲಿ ಐತಿಹಾಸಿಕ ಸಮಾವೇಶವಾಗಿ ರೂಪುಗೊಳ್ಳುವಂತೆ ಮಾಡಬೇಕಿದೆ. ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಜನತೆ  ಬರಲಿದ್ದು ಅವರಿಗೆ ಊಟ, ನೀರು ಶೌಚಲಾಯದ ವ್ಯವಸ್ಥೆ ಕೊರತೆ ಆಗದಂತೆ ಮಾಡಬೇಕೆಂದು ಸೂಚಿಸಿ ಯಾರಿಗೆ ಯಾವ ಜವಾಬ್ದಾರಿ ನೀಡಿದೆ ಎಂಬುದನ್ನು ಪರಿಶೀಲನೆ ನೀಡಿದರು.
ನಗರದ 25 ವಾರ್ಡಿನ ಕಾರ್ಪೊರೇಟರ್ ಗೋವಿಂದರಾಜುಲು ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಯ ಜವಾಬ್ದಾರಿ ನೀಡಿದ್ದು. ಜನರಿಗೆ ಆರು ಲಕ್ಷ ಅರ್ಧ ಲೀಟರ್ ಬಾಟಲ್ ವ್ಯವಸ್ಥೆ ಮಾಡುತ್ತಿದೆ. ಅಲ್ಲದೆ ಊಟದ ಪೆಂಡಾಲ್ ಬಳಿ ಏಕಕಾಲದಲ್ಲಿ ಐದು ನೂರು ಜನ ಕೈ ತೊಳೆಯುವ ವ್ಯವಸ್ಥೆ ಮಾಡಿದೆ ಎಂದು ಗೋವಿಂದರಾಜುಲು ತಿಳಿಸಿದರು.
ಬರುವ ಜನತೆಗೆ ಊಟಕ್ಕೆ ಹುಗ್ಗಿ, ಪಲಾವ್, ಮೊಸರನ್ನ, ಮೊಸರ ಬಜ್ಜೆ, ಮಜ್ಜಿಗೆ, ಚಟ್ನಿ ನೀಡಲಿದೆಯಂತೆ. 
ರಾಜ್ಯದೆಲ್ಲೆಡಯಿಂದ ಕಾರ್ಯಕರ್ತರನ್ನು ಕರೆತರಲು ಸಾರಿಗೆ ಇಲಾಖೆಯ ಎಂಟು ಸಾವಿರ ಬಸ್ ಗಳನ್ನು ಬುಕ್ ಮಾಡಲಾಗಿದೆಯಂತೆ.
ಒಟ್ಟಾರೆ ಸಮಾವೇಶಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ವೇಗವಾಗಿ ನಡೆಯತೊಡಗಿವೆ.