ಕೇಶವ ವಿದ್ಯಾಮಂದಿರದಲ್ಲಿ ಯೋಗ ದಿನಾಚರಣೆ

ಹುಳಿಯಾರು, ಜೂ. ೨೪- ಪಟ್ಟಣದ ಕೇಶವ ವಿದ್ಯಾಮಂದಿರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಅಧ್ಯಕ್ಷ ಜಯಣ್ಣ ಮಾತನಾಡಿ, ಮಕ್ಕಳು ಯೋಗ ಅಭ್ಯಾಸವನ್ನು ಪ್ರತಿನಿತ್ಯ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹಾಗೂ ಸದೃಢವಾದ ದೇಹ ಮತ್ತು ಸದೃಢವಾದ ಮನಸ್ಸು ರೂಪಿಸುವಲ್ಲಿ ಯೋಗ ಪ್ರಮುಖವಾದ ಪಾತ್ರ ವಹಿಸುತ್ತದೆ. ವ್ಯಕ್ತಿಯನ್ನು ತುಂಬಾ ಕ್ರಿಯಾಶೀಲನನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಯೋಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ವಿದ್ಯಾರ್ಥಿಗಳಾದ ದೀಪಿಕಾ ಮತ್ತು ಸಂಗಡಿಗರು ಯೋಗ ಗೀತೆಯನ್ನು ಹಾಡಿದರು. ಮುಖ್ಯೋಪಾಧ್ಯಾಯರಾದ ಎಚ್.ಬಿ.ಸನತ್‌ಕುಮಾರ್ ಅವರು ಯೋಗ ಪ್ರತಿಜ್ಞಾವಿಧಿ ಬೋಧಿಸಿದರು.
ಉಪಾಧ್ಯಕ್ಷ ಈಶ್ವರಪ್ಪ ನವರು ಯೋಗ ದಿನದ ಮಹತ್ವವನ್ನು ವಿವರಿಸಿದರು. ಶಾಲಾ ಶಿಕ್ಷಕ ಮಧು ಯೋಗಾಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಶಾಲಾ ಖಜಾಂಚಿಗಳಾದ ಎಂ.ವಿ.ರಮೇಶ್, ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.