
ಕೋಲಾರ,ಏ,೧-ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ಬೆಂಗಳೂರಿನ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಯುವ ಜಾಗೃತಿ ಸಮಾವೇಶಕ್ಕೆ ತಾಲೂಕಿನ ವಾಲ್ಮೀಕಿ ಸಮುದಾಯದ ಬಂಧುಗಳು ಭಾಗವಹಿಸಿದರು.
ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಬಾಲಗೋವಿಂದ್ ಮಾತನಾಡಿ, ವಾಲ್ಮೀಕಿ ಸಮುದಾಯದ ಬೇಡಿಕೆಗಳ ಜಾರಿಗಾಗಿ ಹಾಗೂ ಸಮುದಾಯದ ಬಂಧುಗಳಿಗೆ ಜಾಗೃತಿ ಮೂಡಿಸಲು ಈ ಸಮಾವೇಶವು ನಡೆಯಲಿದೆ, ಅಹಿಂದ ಹೆಸರಲ್ಲಿ ರಾಜಕೀಯ ಮಾಡುವ ಪಕ್ಷಗಳು ಸಮುದಾಯ ನಿರ್ಲಕ್ಷ್ಯ ಮಾಡಿದ್ದಾರೆ, ಕೇವಲ ವೋಟ್ ಬ್ಯಾಂಕ್‌ಗಳಾಗಿ ಈ ಸಮುದಾಯಗಳನ್ನು ಬಳಸಿಕೊಳ್ಳುತ್ತಾ ಇದ್ದು ಸುಳ್ಳು ಭರವಸೆಗಳು ನೀಡುವ ಪಕ್ಷಗಳಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ಬುದ್ದಿ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಶಿಕ್ಷಣ,ಮತ್ತು ಉದ್ಯೋಗದ ಮೀಸಲಾತಿಗಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಅನೇಕ ಹೋರಾಟಗಳು, ಪ್ರತಿಭಟನೆಗಳನ್ನು ನಡೆಸಿದ ಭಾಗವಾಗಿ ಮೀಸಲಾತಿ ಕೊಟ್ಟಿದ್ದಾರೆ ಆದರೆ ಸರಕಾರಗಳು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು ಅನೇಕ ಸಂದರ್ಭಗಳಲ್ಲಿ ಸರಕಾರಗಳು ದಲಿತರು, ಶೋಷಿತರು, ಬಡವರು, ಮಹಿಳೆಯರಿಗೆ ಶೋಷಣೆ ಮಾಡಿದ್ದಾರೆ ಅದನ್ನು ಮನಗೊಂಡು ಈ ಸಮಾವೇಶವು ನಡೆಯುತ್ತಾ ಇದ್ದು ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಬಂಧುಗಳು ಭಾಗವಹಿಸಲಿದ್ದು ಅನೇಕ ವಿಷಯಗಳ ಬಗ್ಗೆ ಚರ್ಚೆ ಕೂಡ ಮಾಡಲಿದ್ದೇವೆ ಎಂದರು.
ಸಮುದಾಯದ ಹಿರಿಯ ಮುಖಂಡ ನರಸಿಂಹಯ್ಯ, ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ಆನಂದ್ ಕುಮಾರ್, ಗಿರೀಶ್, ಕೋಟೆ ಮಧು, ಬೆಳ್ಳೂರು ತಿರುಮಲೇಶ್, ಖಾದ್ರಿಪುರ ನವೀನ್, ಐತರಸನಹಳ್ಳಿ ನರಸಿಂಹಪ್ಪ, ಅಂಬರೀಶ್, ಸುಗಟೂರು ವೇಣು, ಗ್ರಾಪಂ ಸದಸ್ಯ ನಾಗೇಶ್, ಕುಡುವನಹಳ್ಳಿ ಅಂಜಿ, ರಂಗನಾಥ್, ಬಾಬು ಇದ್ದರು.