ಕೇಳಭಾಗದ ರೈತರಿಗೆ ನೀರು ಪೂರೈಸಲು ಸೂಚನೆ

ತುಂಗಭದ್ರಾ ಕೇಳಭಾಗದ ರೈತರು ನೀರು ಒದಗಿಸುವಲ್ಲಿ ಅಧಿಕಾರಿಗಳು ವಿಫಲ ತರಾಟೆ
ರಾಯಚೂರು,ಜುಲೈ,೨೬,ತುಂಗಭದ್ರಾ ಡ್ಯಾಮಿನ ಎಡೆದಂಡೆ ನಾಲೆಯ ಕೇಳಭಾಗದ ರೈತರಿಗೆ ನೀರು ಒದಗಿಸುವಲ್ಲಿ ಮೇಲ್ಭಾಗದ ಅಧಿಕಾರಿಗಳು ಸಂಪೂರ್ಣ ವಿಫಲವಾಗಿ ಕೆರೆ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ತಪ್ಪು ಮಾಹಿತಿ ನೀಡಿದ ಸಿಂಧನೂರು ಹಾಗೂ ತಾಲೂಕು ಮಟ್ಟದ ಎಇಇ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತುಂಗಭದ್ರಾ ಎಡೆದಂಡೆ ಕಾಲುವೆಗೆ ನೀರು ಪೂರೈಸಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ,
ತುಂಗಭದ್ರಾ ಡ್ಯಾಮಿನ ಎಡೆದಂಡೆ ನಾಲೆಯ ಕೇಳಭಾಗದ ಮೈಲ್ ೬೯-೧೦೪ ವರೆಗೆ ಐಸಿಸಿ ೧೭೭ ಪ್ರಕಾರ ನೀರು ಪೂರೈಕೆ ಮಾಡಲು ಆದೇಶ ವಿದ್ದರೂ ಅದನ್ನು ಗಾಳಿ ತೂರಿ ನೀರು ಪೂರೈಕೆಯಲ್ಲಿ ಎಡವಿದ ಅಧಿಕಾರಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದು ಸೂಚನೆ ನೀಡಿದರು.
ಮಾನ್ವಿ ತಾಲೂಕು ನಲ್ಲಿ ೪೭-೬೦ ಮೇಲ್ ನಂತೆ ಅನಧಿಕೃತವಾಗಿ ನೀರು ಪೂರೈಕೆ ಆಗದಂತೆ ತಡೆಯಬೇಕು ಎಂದು ಎಚ್ಚರಿಸಿದರು.
ಈ ವೇಳೆ ರೈತ ಮುಖಂಡರು ಮದ್ಯ ಪ್ರವೇಶಿಸಿ ಮಾತನಾಡುತ್ತಾ, ಕೇಳಭಾಗದ ರೈತರಿಗೆ ನೀರು ಒದಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದು, ಅಕ್ರಮ ಪಂಪ್ ಸೆಟ್ ಗಳಿಗೆ ಆದ್ಯತೆ ನೀಡುತ್ತಿರುವದರಿಂದ ಕೆಳಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಜಿಲ್ಲಾಧಿಕಾರಿಗಳು ಅಕ್ರಮವಾಗಿ ನೀರು ಪೂರೈಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು
ರೈತರಿಗೆ ಕಾಲ ಕಾಲಕ್ಕೆ ನೀರು ಪೂರೈಕೆ ಮಾಡುವಂತೆ ಒತ್ತಾಯಸಿದರು.
ರೈತರ ಮಾಹಿತಿ ಆಧಾರ ಮೇರೆಗೆ ಅಧಿಕಾರಿಗಳಲ್ಲಿ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದರು.
ಗಣೇಕಲ್ ಜಲಾಶಯಕ್ಕೆ ಎಷ್ಟು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ರೈತರಿಗೆ ಎಷ್ಟರ ಮಟ್ಟಿಗೆ ನೀರು ಪೂರೈಕೆ ಆಗುತ್ತಿದೆ ಅದರ ವರದಿ ನೀಡುವಂತೆ ಸೂಚನೆ ನೀಡಿದರು.
ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅನುಗುಣವಾಗಿ ಶಾಶ್ವತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.