ಕೇರಿಂಗ್ ಸೋಲ್ಸ್ ವತಿಯಿಂದ ರಮಜಾನ ಪ್ರಯುಕ್ತ ಆಹಾರ ಕಿಟ್ ವಿತರಣೆ

ವಿಜಯಪುರ :ಎ.12: ನಿರ್ಗತಿಕರಿಗೆ, ಬಡ ಕುಟುಂಬವನ್ನು ಗುರುತಿಸಿ ಅವರಿದ್ದ ಸ್ಥಳಕ್ಕೆ ವಿಜಯಪುರ ಜಿಲ್ಲೆಯ ತುಂಬಾ ಆಹಾರ ಕಿಟ್‍ಗಳನ್ನು ನೀಡುವುದರ ಮೂಲಕ ದಯೆ, ಕರುಣೆ, ದಾನ ಧರ್ಮದ, ಶಾಂತಿ ಸಂಕೇತವಾದ ರಮಜಾನ ಹಬ್ಬದ ಪ್ರಯುಕ್ತ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಆಸೀಫ್ ದೊಡ್ಡಮನಿ ಮಾತನಾಡಿ, ರಮಜಾನ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂದು ಉದ್ದೇಶದಿಂದ ಸಕಲ ಬಡ ಕುಟುಂಬ ವರ್ಗಕ್ಕೆ ಮನೆ ಮನೆಗೆ ತೆರಳಿ ಆಹಾರ ಕಿಟ್ ವಿತರಣೆ ಮಾಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಸಾಮಾನ್ಯವಾಗಿ ದುಡ್ಡಿದ್ದವರು ಪ್ರತಿದಿನ ಸಂಭ್ರಮ ಸಡಗರದಿಂದ ಇರುತ್ತಾರೆ. ಆದರೆ ಬಡ ಕುಟುಂಬದವರು ನಿತ್ಯ ನೋವಿನ ನರಳಾಟದಿಂದ ಜೀವನ ಸಾಗಿಸುತ್ತಾರೆ. ಇಂತಹ ಸ್ಥೀತಿಯನ್ನು ಕಂಡು ನಮ್ಮ ಸಂಸ್ಥೆಯಿಂದ ಅವರಿಗೆ ನಾವು ಬೆನ್ನೆಲಬಾಗಿ ನಿಲ್ಲಲ್ಲು ಮುಂದೆ ಹೆಜ್ಜೆ ಹಾಕುತ್ತಿವೆ. ಮನುಷ್ಯ ಒಂದೇ ಭಾರಿ ಜನಿಸುವುದು ಆದರೆ ಬಡತನದಿಂದ ನಿತ್ಯ ನೋವಿನ ಪರಿಸ್ಥಿತಿ ಅನುಭವಿಸುವವರು ನಿತ್ಯ ಸಾವಿನೊಂದಿಗೆ ಹೋರಾಟ ಮಾಡುತ್ತಿದ್ದಾರೆ ಇಂತಹ ಮನಸ್ಥಿತಿಯವರೊಂದಿಗೆ ನಮ್ಮ ಟ್ರಸ್ಟ್ ಕೈಲಾದ ಸಹಾಯ ಹಾಗೂ ಅವರ ನೋವಿಗೆ ಸ್ವಲ್ಪ ವಿರಾಮ ಹೇಳಲು ಬಯಸುವ ವಿಚಾರದಿಂದ ಇಂತಹ ಕಾರ್ಯಗಳು ಮೇಲಿಂದ ಮೇಲೆ ಹಮ್ಮಿಕೊಳ್ಳುವುದು ನಮ್ಮ ಸಂತೋಷವನ್ನುಂಟು ಮಾಡುತ್ತದೆ ಎಂದು ಹೇಳಿದರು.
ಉಪಾದ್ಯಕ್ಷರಾದ ಮಹ್ಮದಹುಸೇನ ದೊಡ್ಡಮನಿ ಮಾತನಾಡಿ, ಇಂತಹ ಕುಟುಂಬಕ್ಕಾಗಿಯೇ ನಗರದ ವಿವಿಧ ಸ್ಥಳಗಳಾದ ನವಬಾಗ, ಸಕಾಫ್ ರೋಜಾ, ದರಬಾರ ಗಲ್ಲಿ, ಆಸಾರ ಗಲ್ಲಿ, ಬಡಿಕಮಾನ, ರಹೀಮ ನಗರ, ಜಲನಗರ, ಇಬ್ರಾಹಿಂಪುರ, ರಾಮನಗರ, ನಿಸಾರಮಹೊಲ್, ಜುಮ್ಮಾ ಮಸೀದಿ ರೋಡ್, ಶೇಖ ಕಾಲೋನಿ ಖಾಜಾ ನಗರ, ಜಮಖಾನಿ ಗಲ್ಲಿ ಹಾಗೂ ಹಲವು ಸ್ಥಳಗಲ್ಲಿ ಸೇರಿದಂತೆ ಸುಮಾರು 500 ಆಹಾರ ಕಿಟ್‍ಗಳನ್ನು ತಯಾರ ಮಾಡಿಕೊಂಡು ಅವರಿದ್ದ ಸ್ಥಳಕ್ಕೆ ತೆರಳಿ ಆಹಾರ ಕಿಟ್ ನೀಡುತ್ತಿರುವುದು ಸಂತಸದ ವಿಷಯವಾಗಿದೆ.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಫೀಯಾ ದೊಡ್ಡಮನಿ ಅವರು ಆಹಾರ ಪ್ರತಿಯೊಂದು ವಿಶೇಷವಾಗಿ ರಮಜಾನ ಹಬ್ಬಕ್ಕೆ ಉಪಯೋಗವಾಗುವ ಆಹಾರ ಪದಾರ್ಥವು ಒಳಗೊಂಡಿವೆ.
ಈ ಸಂದರ್ಭದಲ್ಲಿ ಆಹಾರ ಕಿಟ್ ತಗೆದುಕೊಂಡ ಬಡ ಕುಟುಂಬ ವರ್ಗವು ಇಂತಹ ಸಂಸ್ಥೆಯಿಂದ ನಮ್ಮಂತಹ ಬಡಜನರಿಗೆ ಅನುಕೂಲವಾಗುತ್ತಿದ್ದು, ಇಂತಹ ಕಾರ್ಯಗಳು ಮಾಡುವ ಶಕ್ತಿ ದೇವರು ಇವರಿಗೆ ಇನ್ನು ಹೆಚ್ಚಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಅಸ್ಲಂ ಕರ್ಜಗಿ, ವಿನಾಯಕ ಕುಂಟೆ, ಬಂದೇನಮಾಜ ಲೋಣಿ, ನ್ಯಾಮತ್ ಪಟೇಲ, ಶ್ರೀಮತಿ ಬೇನಜೀರ ಮುಂತಶೀರ, ಸಂಸ್ಥೆಯ ಪ್ರತಿನಿಧಿಗಳಾದ ನಿಯಾಜ ಬಾಗವಾನ, ಅಹೆತೆಶ್ಯಾಮ, ಜುನೇದ ಇನಾಮದಾರ, ನಿಸಾರ ಶೇಖ, ಶಫೀವೂಲ್ಲಾ ಸಂಗಾಪೂರ, ಮುಬಶೀರ ಮಹಾಬರಿ, ಕದೀರ, ಸಮೀರ ಸಿಪಾಯಿ, ಗೌಸ ಮಲ್ಲೇದ, ಝೈದ ಡಾಂಗೆ, ಅಮಾನ, ಶೋಯೋಬ ಜತ್ ಮುಂತಾದವರು ಇದ್ದರು.