ಕೇರಳ ಸ್ಟೋರಿ ವೀಕ್ಷಿಸಿ ಪ್ರೇಯಸಿ ಮೇಲೆ ಯುವಕ ಅತ್ಯಾಚಾರ!

ಇಂದೋರ್, ಮೇ ೨೩- ’ದಿ ಕೇರಳ ಸ್ಟೋರಿ’ ಚಿತ್ರದ ಕುರಿತು ಅಂತರ್ ಧರ್ಮೀಯ ಪ್ರೇಮಿಗಳ ನಡುವೆ ಜಗಳವಾದ ಬಳಿಕ ಯುವಕನೊಬ್ಬ ತನ್ನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಅತ್ಯಾಚಾರದ ನಂತರ ಸಂತ್ರಸ್ತೆ ನೀಡಿದ ದೂರಿನಂತೆ ಪೊಲೀಸರು, ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿ ಇಸ್ಲಾಂಗೆ ಮತಾಂತರಗೊಳಿಸುವಂತೆ ಆಕೆಯ ಮೇಲೆ ಒತ್ತಡ ಹೇರಿದ ಆರೋಪದಡಿ ೨೩ ವರ್ಷದ ಫೈಜಾನ್ ಎಂಬಾತನನ್ನು ಬಂಧಿಸಲಾಗಿದೆ.
ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಯುವಕ, ಯುವತಿಯೊಂದಿಗೆ ಕೆಲಕಾಲ ವಾಸವಾಗಿದ್ದ
ಆದರೆ ಕೆಲವು ದಿನಗಳಿಂದ ನಿನ್ನನ್ನು ಮದುವೆಯಾಗಬೇಕಾದರೆ ನೀನು ಇಸ್ಲಾಂಗೆ ಮತಾಂತರಗೊಳ್ಳಬೇಕು ಎಂದು ಪದೇ ಪದೇ ಒತ್ತಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಇತ್ತೀಚೆಗೆ ಯುವಕ ಮತ್ತು ಯುವತಿ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ವೀಕ್ಷಿಸಿದ, ಚಿತ್ರದ ಕುರಿತು ನಡೆದ ಚರ್ಚೆ ವಾಗ್ವಾದಕ್ಕೆ ತಿರುಗಿ ಇಬ್ಬರ ನಡುವೆ ಭಾರೀ ಗಲಾಟೆ ನಂತರ ಆತ ತನ್ನ ಮೇಲೆ ಅತ್ಯಾಚಾರವೆಸಗಿ ಅಲ್ಲಿಂದ ಪರಾರಿಯಾಗಿದ್ದಾನೆ ಯುವತಿ ದೂರಿದ್ದಾಳೆ.
ಸಂತ್ರಸ್ತೆಯು ನೀಡಿದ ದೂರಿನ ಮೇರೆಗೆ ಇಂಧೋರ್ ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.