
ದಾವಣಗೆರೆ. ಮೇ.೨೫; ಲವ್ ಜಿಹಾದ್ ಹಿನ್ನಲೆ ಹೊಂದಿರುವ ದಿ ಕೇರಳ ಸ್ಟೋರಿ ಸಾಕಷ್ಟು ಸುದ್ದಿ ಮಾಡುತ್ತಿತ್ತು. ಅಲ್ಲದೆ ವಿರೋಧ ಕೂಡ ಇದ್ದು.. ದಾವಣಗೆರೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದೆ. ನಗರದ ಪ್ರೇರಣಾ ಯುವ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ಇಲ್ಲಿನ ತ್ರಿಶೋಲ್ ಚಿತ್ರಮಂದಿರಗಳಲ್ಲಿ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ಎರಡೇರಡು ಶೋ ಗಳನ್ನು ಕೇವಲ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಟ್ಟಿದ್ದು. ದಾವಣಗೆರೆಯ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿನಿಯರು ಸಿನಿಮಾ ವೀಕ್ಷಣೆ ಮಾಡಲು ಆಗಮಿಸಿದ್ದು, ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್ ಟಿ ವೀರೇಶ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಯ ಮುಖಂಡರು ವಿದ್ಯಾರ್ಥಿನಿಯರಿಗೆ ಸಾಥ್ ನೀಡಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಜಾಗೃತವಾಗಲು ಈ ಸಿನಿಮಾ ಸಹಕಾರಿಯಾಗಿದೆ.. ಅಲ್ಲದೆ ನೈಜ್ಯ ಘಟನೆಗಳನ್ನು ಒಳಗೊಂಡ ಸಿನಿಮಾವಾಗಿದೆ.. ಇದನ್ನು ಪ್ರತಿಯೊಬ್ಬರು ನೋಡಬೇಕು ಎಂದು ಹಿಂದೂ ಮುಖಂಡರು ಹಾಗೂ ವಿದ್ಯಾರ್ಥಿನಿಯರು ಮನವಿ ಮಾಡಿಕೊಂಡಿದ್ದಾರೆ..