ಕೇರಳ ರಾಜ್ಯಪಾಲ ಆರಿಫ್ ಗೆ ಕೊರೊನಾ

ತಿರುವುನಂತಪುರ, ನ 7- ಕೇರಳ ರಾಜ್ಯಪಾಲ ಆರಿಫ್ ಮೊಹ್ಮದ್ ಖಾನ್ ಗೆ ಕೊರೊನಾ ಸೋಂಕು ತಗುಲಿದೆ‌.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರು, ತಮಗೆ ಸೋಂಕಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆದರೆ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.


ಕಳೆದ ವಾರ ದೆಹಲಿಯಲ್ಲಿ ನಮ್ಮ ಜತೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ದ್ದ ರಾಜ್ಯಪಾಲರು ನಿನ್ನೆ ಬೆಳಿಗ್ಗೆ ತಿರುವನಂತಪುರಕ್ಕೆ ವಾಪಾಸ್ಸಾಗಿದ್ದರು.
ಇಂದು ಅವರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾ ಸೋಂಕಿರುವುದು ಖಚಿತವಾಗಿದೆ.