ಕೇರಳ ರಾಜ್ಯದಲ್ಲಿ ಹಕ್ಕಿಜ್ವರ : ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ

ವಿಜಯಪುರ:ಜ:8: ಹಕ್ಕಿಜ್ವರ ಕೇರಳ ರಾಜ್ಯದಲ್ಲಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಕೋಳಿ ಉತ್ಪನ್ನಗಳು ಬರದಂತೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

ಹಕ್ಕಿಜ್ವರ ಇನ್‍ಫ್ಲೂವೆಂಜಾ ವೈರಸ್‍ನಿಂದ ಹರಡುವ ರೋಗವಾಗಿದೆ ಅದು ಮನುಷ್ಯರಿಗೂ ಕೂಡ ಹರಡುವ ಸಾಧ್ಯತೆಗಳು ಇರುತ್ತವೆ ರೋಗಗ್ರಸ್ತ ಕೋಳಿಗಳಿಂದ ಈ ರೋಗವು ಬೇರೆ ಕೋಳಿಗಳಿಗೆ ಹರಡುತ್ತದೆ ಮನುಷ್ಯರಿಂದ ಮನುಷ್ಯರಿಗೆ ಕೂಡ ಹರಡುವ ಸಾಧ್ಯತೆ ಇರುತ್ತದೆ. ಇದಲ್ಲದೆ ಹಕ್ಕಿಜ್ವರ ಕೇರಳದ ರಾಜ್ಯದಲ್ಲಿ ಕಂಡು ಬಂದಿದ್ದು ಕಾರಣ ಜಿಲ್ಲೆಯಲ್ಲಿ ಕೋಳಿ ಉತ್ಪನ್ನಗಳ ಕೇರಳ ರಾಜ್ಯದಿಂದ ವಿಜಯಪುರ ಜಿಲ್ಲೆಗೆ ಬರುವುದಿಲ್ಲ ಆತಂಕ ಪಡುವ ಅವಶ್ಯಕತೆ ಇಲ್ಲ.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆರ್ ಆರ್ ಟಿ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ಸನ್ನದ್ದುಗೊಳಿಸಿ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಿಯಮಿತವಾಗಿ ಹಕ್ಕಿ ಜ್ವರ ಸರ್ವೇಕ್ಷಣಾ ಕಾರ್ಯಕ್ರಮವು ಜಾರಿಯಲ್ಲಿದೆ. ಹಾಗೂ ವಾತಾವರಣದಿಂದ ಕೋಳಿ ಹಿಕ್ಕಿಯಿಂದ ಕೋಳಿ ಆಹಾರ, ರೆಕ್ಕೆಪುಕ್ಕಗಳು, ಕೋಳಿಗಳನ್ನು ಸ್ಯಾಂಪಲ್ ರಕ್ತಗಳನ್ನು ಪ್ರತಿ ತಿಂಗಳು ಪ್ರಾಣಿ ಆರೋಗ್ಯ ಸಂಸ್ಥೆ ಬೆಂಗಳೂರು ಲ್ಯಾಬ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾವುದೇ ರೀತಿಯ ಹೆಚ್ಚಿನ ಸಂಖ್ಯೆಗಳಲ್ಲಿ ಕೋಳಿಗಳು ಮೃತಪಟ್ಟರೆ ಹಾಗೂ ರೋಗದ ಬಗ್ಗೆ ನಿಗಾ ಇಡಲಾಗಿದೆ.

ಜಿಲ್ಲೆಯ ಗಡಿಭಾಗದಲ್ಲಿರುವ ವೈದ್ಯಾಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಬೇರೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರುವ ಕೋಳಿ ಮತ್ತು ಮೊಟ್ಟೆ ಮೇಲೆ ನಿಗಾ ಇರಿಸಲಾಗಿದೆ ಹಾಗೂ ಪಕ್ಷಿಗಳ ಕೆರೆ ಹಾಗೂ ನೀರಿನ ಸಂಗ್ರಹಾಲಯಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟಿರುವ ಪಕ್ಷಿಗಳ ಬಗ್ಗೆ ಪಶುಪಾಲನೆ ಇಲಾಖೆಯಿಂದ ನಿಗಾ ಇಡಲಾಗಿದೆ.

ಜಿಲ್ಲೆಯ ನಾಗರೀಕರು ಕೋಳಿ ಮೊಟ್ಟೆಯನ್ನು ಉತ್ತಮವಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಆದಕಾರಣ ಸಾರ್ವಜನಿಕರು ಹಾಗೂ ಕೋಳಿ ಹಾಗೂ ಕೋಳಿ ಉತ್ಪನ್ನ ಮಾರಾಟಗಾರರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.