ಕೇರಳ ಮಾದರಿಯಲ್ಲಿ ರೈತ ಋಣ ಮುಕ್ತ ಕಾಯ್ದೆ ಜಾರಿಯಾಗಲಿ: ಬಸವರಾಜ


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ16: ಕೇರಳ ಮಾದರಿಯಲ್ಲಿ ಋಣ ಮುಕ್ತ ಕಾಯ್ದೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿ ತರಬೇಕು ಎಂದು ಸಿಪಿಐಎಂ ರಾಜ್ಯ ಪ್ರದಾನ ಕಾರ್ಯದರ್ಶಿ ಯು.ಬಸವರಾಜ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ  ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರೈತರಿಗೆ ಸರಿಯಾದ ರೀತಿಯಲ್ಲಿ ಬೆಳೆಹಾನಿ ಪರಿಹಾರ ಸಿಗುತ್ತಿಲ್ಲ. ಪ್ರಕೃತಿಯ ವಿಕೋಪಕ್ಕೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇರಳ ಸರ್ಕಾರ ಈಗಾಗಲೇ ಜಾರಿ ತಂದಿರುವ ರೈತರ ಋಣಮುಕ್ತ ಕಾಯ್ದೆಯನ್ನು ರಾಜ್ಯದಲ್ಲಿಯೂ ಜಾರಿ ಮಾಡಬೇಕು. ಈ ಮೂಲಕ ಬೆಳೆ ಹಾನಿಗೊಳಾಗದ ರೈತನಿಗೆ ಸಂಪೂರ್ಣ ಪರಿಹಾರ ನೀಡಬೇಕು. ಅಲ್ಲದೆ ಆತನ ಸಾಲ ಮನ್ನಾ ಮಾಡಬೇಕು. ಬಡ ರೈತ ಕೂಲಿ ಕಾರ್ಮಿಕರಿಗೆ ತಲಾ ನಾಲ್ಕು ಎಕರೆ ಭೂಮಿಯನ್ನು ಸರ್ಕಾರ ಉಚಿತವಾಗಿ ನೀಡಬೇಕು. ಕೇಂದ್ರ ಸರ್ಕಾರ ರದ್ಧು ಮಾಡಿರುವ ಮೂರು ಕೃಷಿ ಕಾಯ್ದೆಯನ್ನು ಕೂಡಲೇ ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಕೃಷಿ ಕಾಯ್ದೆ, ನಿರುದ್ಯೋಗ ಹಾಗೂ ಕಾರ್ಮಿಕರ ಸಮಸ್ಯೆ ಕುರಿತು ಸೆ.18 ರಂದು ಬಾಗಪಲ್ಲಿಯಲ್ಲಿ ಸಿಪಿಐಎಂ ರಾಜ್ಯ ಸಮಾವೇಶ ನಡೆಯಲಿದೆ. ಚರ್ಚೆಗೆ ಮುಂದಾಗಿ ಸಮಾವೇಶದಲ್ಲಿ ಹೋರಾಟದ ರೂಪರೇಷಗಳನ್ನು ರೂಪಿಸಲಾಗುವುದು ಎಂದರು. ಮುಂದಿನ 2023 ಚುನಾವಣೆಯಲ್ಲಿ ಸಿಪಿಐಎಂ ಪಕ್ಷ ಸ್ಪರ್ಧಿಸದೆ. ರಾಜ್ಯದಲ್ಲಿ 20 ಸ್ಥಾನಗಳಿಗೆ ಸ್ವರ್ಧೆ ಮಾಡಲು ಚಿಂತನೆ ನಡೆದಿದೆ ಎಂದರು.
ಮುಖಂಡರಾದ ಎಂ.ಜಂಬಯ್ಯನಾಯಕ. ಆರ್. ಭಾಸ್ಕರ್‍ರೆಡ್ಡಿ, ಮಾಳಮ್ಮ, ಆರ್.ಎಸ್,ಬಸವರಾಜ ಗೋಷ್ಠಿಯ್ಲಿ ಪಾಲ್ಗೊಂಡಿದ್ದರು.

Attachments area