ಕೇರಳ: ಜಿ-೨೦ ಶೆರ್ಪಾಗಳ ಸಭೆ

ನವದೆಹಲಿ,ಮಾ.೩೦- ಜಿ- ೨೦ ಶೃಂಗಸಭೆಯ ಅಂಗವಾಗಿ ಜಿ- ೨೦ ಶೆರ್ಪಾಗಳ ನಾಲ್ಕು ದಿನದ ಸಭೆ ಕೇರಳದ ಕುಮಾರಕೋಮ್ ಗ್ರಾಮದಲ್ಲಿ ಇಂದಿನಿಂದ ಆರಂಭವಾಗಿದೆ.

ಈ ವರ್ಷ ಭಾರತದ ಶೆರ್ಪಾ ಅಮಿತಾಬ್ ಕಾಂತ್ ಅಧ್ಯಕ್ಷತೆಯಲ್ಲಿ ಆರಂಭವಾಗಿರುವ ಸಭೆಯಲ್ಲಿ ವಿಶ್ವದ ೨೦ ದೊಡ್ಡ ಆರ್ಥಿಕತೆಗಳು, ಒಂಬತ್ತು ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳಿಂದ ೧೨೦ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದಾರೆ

ಸಭೆಯಲ್ಲಿ ಹಸಿರು ಇಂಧನ,ಬೆಳವಣಿಗೆಯ ಆದ್ಯತೆಗಳು, ಜಾಗತಿಕ ಸವಾಲುಗಳ ಮೇಲೆ ಕೇಂದ್ರೀಕರಿಸಿ ಶೆರ್ಪಾಗಳ ಸಭೆ ನಡೆಯುತ್ತಿದೆ.

ಅಧಿಕೃತ ಹೇಳಿಕೆ ಪ್ರಕಾರ, ಜಿ-೨೦ ನ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಗಳಿಂದ ಹಿಡಿದು ಸಮಕಾಲೀನ ಜಾಗತಿಕ ಸವಾಲುಗಳನ್ನು ಇತರ ಸಮಸ್ಯೆಗಳ ಶ್ರೇಣಿಯೊಂದಿಗೆ ಪರಿಹರಿಸುವವರೆಗೆ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಸಭೆ ಏಪ್ರಿಲ್ ೨ ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಚರ್ಚೆಗಳು ನೀತಿ ವಿಧಾನಗಳು ಮತ್ತು ಸಮಗ್ರ ಕಾರ್ಯಕ್ರಮದ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು ತಿಳಿಸಿವೆ.

ಎರಡನೇ ಶೆರ್ಪಾಗಳ ಸಭೆ ಇದಾಗಿದ್ದು ಜಾಗತಿಕ ಕಾಳಜಿಯ ಹಲವಾರು ಸಮಸ್ಯೆಗಳ ಮೇಲೆ ಕಾರ್ಯನಿರ್ವಹಿಸಲಿವೆ. ೧೩ ಕಾರ್ಯ ಗುಂಪುಗಳ ಅಡಿಯಲ್ಲಿ ಮಾಡಲಾದ ಕೆಲಸವನ್ನು ಒಳಗೊಳ್ಳಲಿದೆ ಎನ್ನಲಾಗಿದೆ.

೨೦೨೩ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅಂಗೀಕರಿಸಲು ಉದ್ದೇಶಿಸಲಾದ ನಾಯಕರ ಘೋಷಣೆಯ ಆಧಾರವನ್ನು ಈ ಚರ್ಚೆಗಳು ರೂಪಿಸುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಗರಿಕ ಸಮಾಜ, ಖಾಸಗಿ ವಲಯ, ಶೈಕ್ಷಣಿಕ ದೃಷ್ಟಿಕೋನದಿಂದ ನೀತಿ ಶಿಫಾರಸುಗಳನ್ನು ಮಾಡುತ್ತಿವೆ. , ಮಹಿಳೆಯರು, ಯುವಕರು, ವೈಜ್ಞಾನಿಕ ಪ್ರಗತಿ ಮತ್ತು ಸಂಶೋಧನೆ ಸೇರಿದಂತೆ ಮತ್ತಿತರ ವಿಷಯಗಳಕುರಿತು ಸಮಗ್ರ ಚರ್ಚೆ ನಡೆಯುವ ಸಾದ್ಯತೆಗಳಿವೆ.