ಕೇರಳ ಚುನಾವಣಾ ವೀಕ್ಷಕರಾಗಿ ರಾಮಕೃಷ್ಣ ನೇಮಕ

ಹೊಸಪೇಟೆ ಮಾ26: ಕೇರಳ ವಿಧಾನಸಭೆಯ ಚುನಾವಣೆಯ ಮಲಬಾರ್ ಪ್ರದೇಶದ ವೀಕ್ಷಕರಾಗಿ ನಗರದ ಕಾಂಗ್ರೆಸ್ ಮುಖಂಡ ನಿಂಬಗಲ್ ರಾಮಕೃಷ್ಣ ನೇಮಕಗೊಂಡಿದ್ದಾರೆ.
ಪ್ರಸ್ತುತ ಕೆಪಿಸಿಸಿ ಸಾಮಾಜಿಕ ಜಾಲತಾಣ ಕಲಬುರ್ಗಿ ವಿಭಾಗದ ಉಸ್ತುವಾರಿಯಾಗಿರುವ ನಿಂಬಗಲ್ ರಾಮಕೃಷ್ಣ ಅವರು ಎಐಸಿಸಿ ವತಿಯಿಂದ ಕೊಚ್ಚಿ, ತ್ರಿಶೂರ್ ಜಿಲ್ಲೆಯ ಪುದುಕಾಡ್, ಉಳ್ಳೂರು, ಕೈಪಮಂಗಲಂ ವಿಧಾನ ಸಭಾ ಕ್ಷೇತ್ರಗಳ ವೀಕ್ಷಕರಾಗಿ ಎಐಸಿಸಿ ನೇಮಕಮಾಡಿದ್ದಾರೆ.