ಕೇಬಲ್ ವೈರ್ ತೆರವಿಗೆ ನಿರ್ಣಯ

ಮೈಸೂರು: ಸಾಂಸ್ಕøತಿಕ ನಗರಿಯ ಅಂದಗೆಡಿಸುತ್ತ ಸಾರ್ವಜನಿಕರಿಗೆ ಕಂಟಕವಾಗಿರುವ ಕೇಬಲ್‍ಗಳ ತೆರವಿಗೆ ಸೂಚನೆ, ನಗರ ಪಾಲಿಕೆಯ ಮಳಿಗೆಗಳಲ್ಲಿ ಬಾಡಿಗೆ ಹೆಚ್ಚಿಸಲು ಶುಕ್ರವಾರ ನಡೆದ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೌನ್ಸಿಲ್ ಸಭೆಯ ಕಾರ್ಯಸೂಚಿ ವಿಷಯಗಳ ಒಪ್ಪಿಗೆ ಪಡೆಯುವ ಮುನ್ನವೇ ಅನಧಿಕೃತವಾಗಿ ಕೇಬಲ್ ಅಳವಡಿಕೆ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಅಯೂಬ್ ಖಾನ್, ಉದ್ಯಾನ, ಸಶಾನ ಬಳಕೆಗೆ ತೆರಿಗೆ ಹಾಕಿ ಬಡ ಜನರಿಗೆ ತೊಂದರೆ ಕೊಡಲಾಗಿದೆ. ಕೇಬಲ್ ಅಳವಡಿಕೆಯಿಂದ 200 ಕೋಟಿ ರೂ. ಆದಾಯ ಬರುವುದನ್ನು ಬಿಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಬಲ್ ತೆರವಿಗೆ ಕೌನ್ಸಿಲ್ ಒಪ್ಪಿದೆ. ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಯಾರ ಒತ್ತಡ ಇತ್ತು ಎಂದು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯೆ ಪ್ರೇಮಾ ಶಂಕರೇಗೌಡ, ಹಾಡಹಗಲೇ ಕೇಬಲ್ ಅಳವಡಿಸುತ್ತಿದ್ದಾರೆ. ಪಾಲಿಕೆ ಸದಸ್ಯರ ಮಾತಿಗೆ ಗೌರವ ಇಲ್ಲ. ಕೌನ್ಸಿಲ್ ಆದೇಶಕ್ಕೂ ಬೆಲೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಪುಷ್ಪಾ ಲತಾ ಚಿಕ್ಕಣ್ಣ, ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ಕೇಬಲ್ ತೆರವು ಕಾರ್ಯಚರಣೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪಾಲಿಕೆ ಆಯುಕ್ತ ಜಿ.ಲಕ್ಷ್ಮಿ?ಕಾಂತ ರೆಡ್ಡಿ ಅವರು, ಕೌನ್ಸಿಲ್ ನಿರ್ಣಯದ ಬಳಿಕ ಕೇಬಲ್ ತೆರವಿಗೆ ಸೂಚನೆ ಕೊಟ್ಟಿದ್ದೇವೆ. ಜೂ. 10ರ ತನಕ ಕಾಲಾವಕಾಶ ನೀಡಿದ್ದೇನೆ. ಅಧಿಕಾರಿಗಳಿಗೆ ಯಾರದೇ ಒತ್ತಡ ಇಲ್ಲ. ಜೂ. 15ರ ನಂತರ ಕೇಬಲ್ ಇದ್ದರೆ ವಶಕ್ಕೆ ಪಡೆದು ಕ್ರಮ ಜರುಗಿಸುತ್ತೆ?ವೆ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೆ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಒಪ್ಪದಿದ್ದಾಗ ಬಿಜೆಪಿ ಸದಸ್ಯರು ಮಧ್ಯ ಪ್ರವೇಶಿಸಿದ್ದರಿಂದ ಗದ್ದಲ ಏರ್ಪಟ್ಟಿತು. ಮೇಯರ್ ಶಿವಕುಮಾರ್ ಸೋಮವಾರದ ತನಕ ಕಾಲಾವಕಾಶ ನೀಡುವಂತೆ ತಿಳಿಸಿದರು. ಇದಕ್ಕೆ ಒಪ್ಪದ ಕಾಂಗ್ರೆಸ್? ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಶನಿವಾರದಿಂದಲೇ ಕೇಬಲ್ ತೆರವು ಮಾಡುವಂತೆ ಆದೇಶಿಸಿದರು.
ಬಾಡಿಗೆ ದರ ಹೆಚ್ಚಳ:
ನಗರ ಪಾಲಿಕೆಯ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ದರ ಹೆಚ್ಚಿಸುವ ಪ್ರಸ್ತಾಪವನ್ನು ಸದಸ್ಯರು ಒಕ್ಕೊರಲಿನಿಂದ ಒಪ್ಪಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಉಪ ಆಯುಕ್ತ ಡಾ.ದಾಸೇಗೌಡ, ದೇವರಾಜ ಮಾರುಕಟ್ಟೆ, ವಿವಿ ಮಾರುಕಟ್ಟೆ, ಧ್ವನಂತರಿ ರಸ್ತೆ, ಕಾಳಿದಾಸ ರಸ್ತೆ ಸೇರಿ ನಗರದ ವಿವಿಧೆಡೆ 1941 ಮಳಿಗೆಗಳಿವೆ 20 ವರ್ಷಗಳಿಂದ ಬಾಡಿಗೆ ದರ ಹೆಚ್ಚಿಸಿಲ್ಲ. ಕನಿಷ್ಠ 34 ರೂ.ಗಳಿಂದ ಗರಿಷ್ಠ 20 ಸಾವಿರ ರೂ. ಬಾಡಿಗೆ ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ 1 ಕೋಟಿ ರೂ. 60 ಲಕ್ಷ ರೂ. ಬಾಡಿಗೆ ಬರುತ್ತಿದೆ.
ರಾಜ್ಯ ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ಕೋರ್ಟ್‍ಗಳಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳಿವೆ. ಬಾಡಿಗೆ ನಿಗದಿಪಡಿಸಲು ತೊಂದರೆ ಇಲ್ಲ. ತೆರವು ಮಾಡದಿರುವಂತೆ ನ್ಯಾಯಾಲಯದ ನಿರ್ದೇಶನ ಇದೆ. ಕೌನ್ಸಿಲ್ ಅನುಮೋದನೆ ಕೊಟ್ಟರೆ ಬಾಡಿಗೆ ದರ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂಬಂಧ ಸಮಿತಿ ರಚನೆ ಮಾಡುವಂತೆ ಸದಸ್ಯ ಬಿ.ವಿ.ಮಂಜುನಾಥ್ ಸಲಹೆ ನೀಡಿದರು. ಕಾಂಗ್ರೆಸ್? ಸದಸ್ಯರಾದ ಶಾಂತಕುಮಾರಿ, ಪುಷ್ಪಲತಾ ಬಾಡಿಗೆ ಬಗ್ಗೆ ಚರ್ಚಿಸಿದರು. ಬಳಿಕ ಸಭೆಯಲ್ಲಿ ಅನುಮೋದನೆ ದೊರೆಯಿತು.
62 ಶೌಚಾಲಯಗಳು:
ಮೈಸೂರು ನಗರ ವ್ಯಾಪ್ತಿಯಲ್ಲಿ 62 ಶೌಚಾಲಯಗಳಿವೆ. 22ಕ್ಕೆ ಟೆಂಡರ್ ಕರೆಯಬೇಕು. 15 ಟೆಂಡರ್ ಪ್ರಕ್ರಿಯೆಯಲ್ಲಿದೆ. 6 ಅವಧಿ ಮುಗಿದಿಲ್ಲ. 19 ಬೂಟ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. 22 ಶೌಚಾಲಯಗಳ ರಿಪೇರಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಉಚಿತ ಬಳಕೆಯ ಶೌಚಾಲಯಗಳು ಎಷ್ಟಿವೆ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದ ಅಧಿಕಾರಿಯನ್ನು ಬಿಜೆಪಿ ಸದಸ್ಯ ಮಾ.ವಿ.ರಾಮಪ್ರಸಾದ್ ತರಾಟೆಗೆ ತೆಗೆದುಕೊಂಡರು. ಅವಧಿ ಮುಗಿದರೂ ಟೆಂಡರ್ ಕರೆಯದಿರುವುದಕ್ಕೆ ಹಣಕಾಸು ಸ್ಥಾಯಿ ಸಮಿತಿ ಸದಸ್ಯ ನಾಗರಾಜು ಪ್ರಶ್ನಿಸಿದರು.
ಚರ್ಚೆಗೆ ತಾರಕಕ್ಕೆರುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಮೇಯರ್ ಶಿವಕುಮಾರ್ ಅವರು ಇದೇ ತಿಂಗಳು 27ರಂದು ಮತ್ತೊಂದು ಕೌನ್ಸಿಲ್ ಸಭೆ ಕರೆಯಬೇಕೆಂದು ತೀರ್ಮಾನಿಸಿದ್ದೇನೆ. ಆ ಸಭೆಗೆ ಅಧಿಕಾರಿಗಳ ಶೌಚಾಲಯಗಳ ಫೆÇಟೋ ಸಮೇತ ಮಾಹಿತಿಯೊಂದಿಗೆ ಬರಬೇಕು ಎಂದು ಹೇಳಿದರು.
ಉಪ ಮೇಯರ್ ಡಾ.ಜಿ.ರೂಪಾ ಇದ್ದರು.