ಕೇನ್ಸ್‌ನಲ್ಲಿ ನಟ ಸಾಧುಕೋಕಿಲ

ನವದೆಹಲಿ,ಮೇ.೨೧-ಕಾನ್ಸ್ ಚಲನಚಿತ್ರೋತ್ಸವವು ಅದ್ದೂರಿಯಾಗಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಕಲಾವಿದರು ಆಗಮಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಸಾಧು ಕೋಕಿಲ ಅವರು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಅವರು ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರನ್ನು ಭೇಟಿ ಮಾಡಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಟ ಮತ್ತು ಗಾಯಕ ಸಾಧು ಕೋಕಿಲ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಹೆಸರು ಮೂಡಿಸಿದ್ದಾರೆ. ಇದೀಗ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎಆರ್ ರೆಹಮಾನ್ ಅವರೊಂದಿಗಿನ ಅನಿರೀಕ್ಷಿತ ಭೇಟಿಯ ಬಗ್ಗೆ ನಟ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ನಂತರ ಅಪರೂಪದ ಅನಿರೀಕ್ಷಿತ
ಭೇಟಿ. ಹಲವು ವರ್ಷಗಳ ಹಿಂದೆ ಕಾನ್ಸ್ ಚಲನಚಿತ್ರೋತ್ಸವದಲ್ಲಿ ತಾವು ಮತ್ತು ರೆಹಮಾನ್ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳ ನೆನಪುಗಳನ್ನು ಹಂಚಿಕೊಂಡರು ಎಂದು ಸಂಗೀತ ಮಾಂತ್ರಿಕ ಎ.ಆರ್ . ಕೋಕಿಲ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಎಆರ್ ರೆಹಮಾನ್ ಜೊತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದ ಆರಂಭದ ದಿನಗಳ ಬಗ್ಗೆ ಹೇಳಿದರು. ಪ್ರಸ್ತುತ, ಇಬ್ಬರು ದಂತಕಥೆಗಳನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.