ಕೇದಾರ ಶ್ರೀಗಳ ಪಟ್ಟಾಭಿಷೇಕ ಮಾ.1ರಂದು

ಕರಜಗಿ:ನ.5:ತಾಲೂಕಿನ ಮಾಶಾಳ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಮಾರ್ಚ್ 1ರಂದು ಕೇದಾರ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ವಿಜೃಂಮಣೆಯಿಂದ ಮತ್ತು ಅರ್ಥಪೂರ್ಣವಾಗಿ ಆಯೋಜನೆ ಮಾಡಲು ಮಠದ ಆಭರಣದಲ್ಲಿ ವಿವಿಧ ಮಠಾಧೀಶರ ಮತ್ತು ಗ್ರಾಮದ ಮುಖಂಡರ ನೇತೃತ್ವದಲ್ಲಿ ಚಿಂತನ ಮಂಥನ ಸಭೆ ನಡೆಯಿತು.ಫೆಬ್ರುವರಿ 9ರಿಂದ ಮಾರ್ಚ್ 1 ರವರೆಗೆ ಕಲಬುರಗಿ ಶರಣಬಸವೇಶ್ವರ ಮಹಾಪುರಾಣ ನಡೆಯಲಿದ್ದು, ಮಾರ್ಚ್ 1ಕ್ಕೆ ಪಟ್ಟಾಧಿಕಾರ ಮಹೋತ್ಸವ ಉಜ್ಜಯಿನಿ ಜಗದ್ಗುರು ಸಾನಿಧ್ಯದಲ್ಲಿ ಹಾಗೂ ನಾಡಿನ ಹರ ಗುರು ಚರಮೂರ್ತಿಗಳು ಮತ್ತು ರಾಜಕೀಯ ಮುಖಂಡರನ್ನು ಪಟ್ಟಾಧಿಕಾರ ಮಹೋತ್ಸವಕ್ಕೆ ಆಹ್ವಾನಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು,ಚೌಡಾಪುರ ಮಹಾಂತೇಶ್ವರ ಮಠದ ಚಿನ್ಮಗಿರಿ ಮಠದ ವಿರುಪಾಕ್ಷ ಶಿವಾಚಾರ್ಯರು, ಮಹಾರಾಷ್ಟ್ರ ಗಣಾಚಾರಿ ಮಠದ ಸೋಮಶೇಖರ್ ಶಿವಾಚಾರ್ಯರು,ಮಾಶಾಳ ಗ್ರಾಮದ ಮುಖಂಡ ಜೆ.ಎಂ.ಕೊರಬು,ಶಿವು ಪಾರಗೊಂಡ, ನಾನಾಸಾಹೇಬ್ ಪಾಟೀಲ್,ಶಿವು ಪ್ಯಾಟಿ, ಶರಣಗೌಡ ಪಾಟೀಲ್ ಇತರರಿದ್ದರು.