ಕೇದಾರನಾಥ ಯಾತ್ರೆ ರದ್ದು

ಡೆಹರಾಡೂನ್,ಜು.೧೨:ಉತ್ತರಾಖಂಡದಲ್ಲಿ ಭಾರಿ ಮಳೆಯಿಂದಾಗಿ ಇಂದು ಕೇದಾರನಾಥ ಧಾಮ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಧಾರಕಾರ ಮಳೆಯಿಂದಾಗಿ ಭೂಕುಸಿತ, ಪ್ರವಾಹದಿಂದಾಗಿ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಹೀಗಾಗಿ, ಚಾರ್‌ಧಾಮ್ ಯಾತ್ರಾ ಕೈಗೊಳ್ಳಲು ಸಾಧ್ಯವಾಗಿಲ್ಲ. ಯಾತ್ರಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ.
ಸೋನ್‌ಪ್ರಯಾಗ್ ಮತ್ತು ಗೌರಿಕುಂಡದಲ್ಲಿ ನಿರಂತರ ಮಳೆಯಿಂದಾಗಿ ಪ್ರಯಾಣಿಕರು ಈ ಪ್ರದೇಶಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ವರ್ಷಧಾರೆಗೆ ೪ ರಸ್ತೆಗಳು ಮತ್ತು ೧೦ ಸಂಪರ್ಕ ರಸ್ತೆಗಳು ಅವಶೇಷಗಳಿಂದ ಬಂದ್ ಆಗಿವೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗಿದೆ.