ಕೇದರನಾಥ ಯಾತ್ರೆಗೆ ತೆರಳಿದ್ದ ಯುವಕ ಸಾವು

ಚಿಕ್ಕಮಗಳೂರು,ಆ.೧-ಕೇದರನಾಥ ಯಾತ್ರೆಗೆ ತೆರಳಿದ್ದ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಯುವಕನೊಬ್ಬ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜನ್ನಾಪುರ ಗ್ರಾಮದ ಗಿರೀಶ್ (೨೫) ಕೇದರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿ.ಮೂಡಿಗೆರೆಯಲ್ಲಿ ಅಡುಗೆಯವನಾಗಿ ಮಾಡುತ್ತಿದ್ದ. ಗಿರೀಶ್ ಕಳೆದ ವಾರ ಮೂಡಿಗೆರೆಯಿಂದ ಕೇದರನಾಥ್ ಯಾತ್ರೆಗೆ ತೆರಳಿದ್ದು,ಅಲ್ಲಿನ ಹವಾಮಾನದಿಂದ ತೀವ್ರ ಅಸ್ವಸ್ಥಗೊಂಡಿದ್ದಾನೆ.
ಬಳಿಕ ಸ್ಥಳೀಯರ ಸಹಾಯದಿಂದ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ .ಚಿಕಿತ್ಸೆ ಫಲಕಾರಿಯಾಗದ ಸಾವನ್ನಪಿದ್ದಾನೆ.
ಈ ಬಗ್ಗೆ ಕೇದರನಾಥ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಗಿರೀಶ್ ಮೃತದೇಹ ರಿಷಿಕೇಶ್ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಕುಟುಂಬಸ್ಥರು ಬರುವಂತೆ ತಿಳಿಸಿದ್ದು,ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.