ಅಥಣಿ :ಜೂ.27: ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಥಣಿಗೆ ಬಂದಾಗ “ಪುರೇ ರಾಜ್ಯ ಕಾ ಚುನಾವ ಅಲಗ ಹೈ, ಔರ ಅಥಣಿ ಕ್ಷೇತ್ರಕಾ ಚುನಾವು ಅಲಗ ಹೈ ಅಥಣಿಕೆ ಲೋಗೊ ಸವದಿಕೊ ಹರಾವೂಗೆ ಎಂದು ಅಲ್ಲಿ ಸೇರಿದ ಬೆರಳೆಣಿಕೆಯಷ್ಟು ಜನರಿಗೆ ಕೇಳಿದ್ದರು” ಅಲ್ಲದೆ ಹಲವು ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಅವರ ಎಲ್ಲ ಟೀಕೆ ಟಿಪ್ಪಣಿಗಳಿಗೆ ಬೆಲೆ ಕೊಡದೆ ನಮ್ಮ ಪ್ರಭುದ್ದ ಮತದಾರ ಪ್ರಭುಗಳು ಮೇ 10 ರಂದು ನನಗೆ ಮತಗಳನ್ನು ಹಾಕುವ ಮೂಲಕ ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಹಾಗೂ ಜಿಲ್ಲೆಯ ಕೆಲ ಸ್ವಯಂ ಘೋಷಿತ ನಾಯಕರು ನನಗೆ ಸೋಲಿಸಲು ನನ್ನ ವಿರುದ್ಧ ತೊಡೆ ತಟ್ಟಿದವರಿಗೆ ನನ್ನ ಕ್ಷೇತ್ರದ ಜನತೆ ಸರಿಯಾದ ರೀತಿಯಲ್ಲಿ ತಕ್ಕ ಉತ್ತರ ಕೊಟ್ಟು ಸುಮಾರು 76 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಗ್ರಾಮಸ್ಥರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ.ಆದರೆ ಈ ಚುನಾವಣೆ ಅಥಣಿ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಘಟನೆಗಳು ನಡೆದಾಗ ಇಡೀ ಕ್ಷೇತ್ರದ ಜನ ನಮ್ಮ ನಾಯಕನ ಸ್ವಾಭಿಮಾನಕ್ಕೆ ಧಕ್ಕೆ ಬರಬಾದು ಎಂದು ಪಕ್ಷಾತೀಯವಾಗಿ, ಜಾತ್ಯಾತೀತವಾಗಿ ನನ್ನ ಬೆಂಬಲಕ್ಕೆ ನಿಂತು ಅಥಣಿ ಕ್ಷೇತ್ರದ ಒಬ್ಬ ಸ್ವಾಭಿಮಾನಿ ಗೆಲ್ಲಬೇಕೆಂಬ ಸಂಕಲ್ಪ ಮಾಡಿ 1 ಲಕ್ಷ 31 ಸಾವಿರದ 600 ಮತಗಳನ್ನು ಕೊಟ್ಟು ಸುಮಾರು 76.122 ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ ಇದಕ್ಕೆಲ್ಲ ಲಕ್ಷ್ಮಣ ಸವದಿ ಕಾರಣ ಅಲ್ಲ.ಇಡೀ ಕ್ಷೇತ್ರದ ಸ್ವಾಭಿಮಾನಿ ಮತದಾರರೇ ಕಾರಣ, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಎಲ್ಲರೂ ನನ್ನ ಬೆಂಬಲಕ್ಕೆ ನಿಂತು ನನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ತಮ್ಮೆಲ್ಲರಿಗೂ ಅಭಿನಂದನೆಗಳು
ಎಂದರು.
ಚುನಾವಣೆಯಲ್ಲಿ ಬಿಜೆಪಿಯ ದೃಷ್ಟಿ ಎರಡೇ ಕಡೆ ಇತ್ತು :-
ಬಿಜೆಪಿ ರಾಜ್ಯ ರಾಷ್ಟ್ರೀಯ ನಾಯಕರು ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕೇವಲ ಎರಡು ಕ್ಷೇತ್ರದ ಕಡೆ ಮಾತ್ರ ಗಮನ ಹರಿಸಿದ್ದರು. ಒಂದು ಇನ್ನೂಂದು ಹುಬ್ಬಳ್ಳಿ ಸೆಂಟ್ರಲ್ ಅಥಣಿಯಲ್ಲಿ ಲಕ್ಷಣ ಸವದಿಯನ್ನ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟು, ಪ್ರದಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ ಶಹಾ, ರಕ್ಷಣಾ ಸಚಿವ ರಾಜನಾಥಸಿಂಗ್, ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಸ್ವಯಂ ಘೋಷಿತ ಹಲವು ನಾಯಕರಂತೂ ಅಥಣಿಯಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಠಿಕಾಣಿ ಹೂಡಿದ್ದರೂ ಅವರ ಆಟ ನಡೆಯಲಿಲ್ಲ ಎಂದು ಲಕ್ಷಣ ಸವದಿ ವ್ಯಂಗ್ಯವಾಡಿದರು,
ಈ ವೇಳೆ ಸುರೇಶ ಮಾಯಣ್ಣವರ, ಶಿವಾನಂದ ದಿವಾನಮಳ, ಶಾಂತಿನಾಥ ನಂದೇಶ್ವರ, ಎಸ್ ಆರ್ ಘೊಳಪ್ಪನವರ, ಬಿ ಕೆ ಚನ್ನರೆಡ್ಡಿ, ಶ್ರೀಶೈಲ ನಾಯಿಕ, ಅರ್ಜುನ ನಾಯಿಕ, ಶಿವಾನಂದ ನಾಯಿಕ, ಶಿವಾನಂದ ಸಂಕ್ರಟ್ಟಿ, ಶಿವಪುತ್ರ ನಾಯಿಕ, ಗ್ರಾಪಂ ಸದಸ್ಯರಾದ ಮಹೆಬೂಬ ಮಕಾಂದಾರ, ಸಂಜು ಹಣಮಾಪೂರ, ಕವಿತಾ ನಾಯಿಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು,