ಕೇಂದ್ರ ಸರ್ಕಾರ ನಡೆಗೆ ಶಾಸಕರ ಖಂಡನೆ

ಚನ್ನಮ್ಮನ ಕಿತ್ತೂರ,ಜೂ17: ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಪ್ರಚಾರ ಮಾಡಿದ್ದೇವೆ. ಅದರಂತೆ ಕೊಟ್ಟ ಮಾತಿಗೆ ನಮ್ಮ ಸರ್ಕಾರ ನಡೆದುಕೊಂಡಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದವರು. ಈಗ ಕಾಂಗ್ರೇಸ್ ಗ್ಯಾರಂಟಿಗಳು ಜನರಿಗೆ ತಲುಪಲು ಬಿಡದಂತೆ ಕೇಂದ್ರ ಸರ್ಕಾರದ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು. ನಾಚಿಕೆಗೇಡಿತನ. ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.
ಹಸಿವು ಮುಕ್ತ ರಾಜ್ಯ ನಿರ್ಮಿಸಲು ಕಾಂಗ್ರೇಸ್ ಸರ್ಕಾರ ಜನರಿಗೆ ಹತ್ತು ಕೆಜಿ ಅಕ್ಕಿ ನೀಡಲು ಪಣತೊಟ್ಟಿದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದ ಹೆಚ್ಚುವರಿ ಅಕ್ಕಿ ಖರೀದಿ ನಾವು ಮುಂದಾಗಿದ್ದಾಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಮಾರಾಟಮಾಡದಂತೆ ಆದೇಶಿಸಿ ಬಡಜನರ ಹೊಟ್ಟೆಗೆ ಹೊಡೆಯುವ ರಾಜಕಾರಣಕ್ಕೆ ಮುಂದಾಗಿದೆಯೆಂದು ಕಿಡಿಕಾರಿದರು.
ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆದರೆ ಜನರು ಸುಮ್ಮನಿರುಲ್ಲಾ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದರು. ಈ ವೇಳೆ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರಿದ್ದರು.