ಕೇಂದ್ರ ಸರ್ಕಾರ ಕಾರ್ಮಿಕರಿಗೆ ಯಾವುದೇ ಕೊಡುಗೆ ನೀಡಿಲ್ಲ:ಮಲ್ಲಿಕಾರ್ಜುನ ಲೋಣಿ

ಸಂಜೆವಾಣಿ ವಾರ್ತೆ.
ವಿಜಯಪುರ,ಮೇ.2: ಕೇಂದ್ರ ಸರಕಾರ ಕಾರ್ಮಿಕರಿಗಾಗಿ ಯಾವ ಕೊಡುಗೆಯನ್ನೂ ನೀಡಿರುವುದಿಲ್ಲ. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆಯನ್ನೂ ಮಾಡಿರುವುದಿಲ್ಲ. ಇದನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳು ಇರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ರಿಯಾಜ ಉಕ್ಕಲಿ, ಶೇಖರ ತೊರವಿ ಮತ್ತು ಮೊಹಸೀನ್ ಉಕ್ಕಲಿ ಅವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಘಟಕದ ಉಪಾಧ್ಯಕ್ಷÀ ರಾಜಶೇಖರ ಯಡಹಳ್ಳಿ, ನ್ಯಾಯವಾದಿ ಕೆ.ಎಫ್. ಅಂಕಲಗಿ ಮತ್ತು ಸಾಹೇಬಗೌಡ ಬಿರಾದಾರ, ಪರ್ವೇಜ ಚಟ್ಟರಕಿ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ಅಬ್ದುಲ್‍ಹಮೀದ ಮುಶ್ರೀಫ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷÀ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಸ ಕಾಲೇಬಾಗ, ಅಪ್ಜಲ್ ಜಾನವೇಕರ, ವಿದ್ಯಾವತಿ ಅಂಕಲಗಿ, ಜಾಕೀರಹುಸೇನ ಮುಲ್ಲಾ, ಇಲಿಯಾಸಅಹ್ಮದ ಸಿದ್ದಿಕಿ, ವಸಂತ ಹೊನಮೋಡೆ, ಶಬ್ಬೀರ ಜಾಗೀರದಾರ, ಫಯಾಜ್ ಕಲಾದಗಿ, ತಾಜುದ್ದೀನ ಖಲೀಫಾ, ಶರಣಪ್ಪ ಯಕ್ಕುಂಡಿ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಎಂ.ಎ. ಬಕ್ಷಿ, ಲಾಲಸಾಬ ಕೊರಬು, ಸತೀಶ ಅಡವಿ, ಅಕ್ಬರ್ ನಾಯಕ, ಅಯುಬ್‍ಖಾನ ನದಾಫ್, ದೇವಾನಂದ ಲಚ್ಯಾಣ, ಅಲ್ಲಾಬಕ್ಷ ಖಲೀಫಾ, ಅಬ್ದುಲ್‍ಪೀರಾ ಜಮಖಂಡಿ, ಪರಶುರಾಮ ಹೊಸಮನಿ, ಮಹ್ಮದಅಯಾಜ ರೋಜಿವಾಲೆ, ಮಹ್ಮದ ಮುಲ್ಲಾ, ಕಲ್ಲಪ್ಪ ಪರಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.