ಕೇಂದ್ರ ಸರ್ಕಾರದ  ಸ್ವನಿಧಿ ಯೋಜನೆ ಕುರಿತ ಕಾರ್ಯಕ್ರಮ

ದಾವಣಗೆರೆ.ಅ.೧೧: ನಗರದ ಶಿವಯೋಗಿ ಮಂದಿರದಲ್ಲಿ  ಕೇಂದ್ರ ಸರ್ಕಾರದ  ಸ್ವ ನಿಧಿ ಯೋಜನೆ ಕುರಿತಾದ ಕಾರ್ಯಕ್ರಮ ನಡೆಯಿತು.  ಮಹಾನಗರ ಪಾಲಿಕೆಯ ಅಭಿಯಂತರ, ಅಭಿಯಾನ ವ್ಯವಸ್ಥಾಪಕ, ವಿರುಪಾಕ್ಷಗೌಡ ಮಾತನಾಡಿ, ಸ್ವ ನಿಧಿ ಯೋಜನೆ ಬೀದಿಬದಿ ಯ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇತ್ತೀಚಿಗೆ ಬೀದಿ ಬದಿಯ ವ್ಯಾಪಾರಿಗಳ ಜೊತೆಗೆ ಚಳಿ ಮಳೆ ಎನ್ನದೆ ಸೂರ್ಯ ಉದಯಿಸುವ ಮೊದಲೇ ತಮ್ಮ ಕಾಯಕದಲ್ಲಿ ತೊಡಗಿರುವಂತಹ ಮತ್ತು ವರ್ಷದಲ್ಲಿ 361 ದಿನಗಳ ಕಾಲ ಮನೆ ಮನೆಗೆ ಪತ್ರಿಕೆಯನ್ನು ತಲಿಪಿಸುವಂತ ಕಾರ್ಯದ ಪತ್ರಿಕಾ ವಿತರಕರನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.ಎಲ್ಲ ವರ್ಗದವರಿಗೆ ವಾರದಲ್ಲಿ ಒಂದು ದಿನ ರಜೆ ಸಿಗುವುದು. ಆದರೆ, ಪತ್ರಿಕಾ ವಿತರಕರೇ ವರ್ಷದಲ್ಲಿ ನಾಲ್ಕು ದಿನ ರಜಾ ಮಾತ್ರ ಸಿಗುವಂತದ್ದು.  ಕೇಂದ್ರ ಸರ್ಕಾರದ ಸ್ವ ನಿಧಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದರ ಮೂಲಕ ಮಹಾನಗರ ಪಾಲಿಕೆಯಲ್ಲಿ ಒಳಪಡುವ ಎಲ್ಲಾ ಪತ್ರಿಕ ವಿತರಕರು ಸರ್ಕಾರದ ಸಾಲ ಸೌಲಭ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಇನ್ನೂ ಹಲವಾರು ಯೋಜನೆಗಳು ಲಭ್ಯವಿದ್ದು, ಸ್ವ ನಿಧಿ ಯೋಜನೆಯಲ್ಲಿ ಒಂದನೇ ಕಂತು 10,000 ಎರಡನೇ ಕಂತು 20,000 ಮೂರನೇ ಕಂತು 50,000ರೂ ಗಳು  ದೊರೆಯುತ್ತಿದ್ದು ತಾವುಗಳು ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರ ಮೂಲಕ ಮುಂದಿನ ಸಾಲ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.ವೈ.ಸಿ. ಶೃತಿ, ವೈ , ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ ಎಂ. ದೊಡ್ಮನೆ, ಆರತಿ ರಮೇಶ್, ಮತ್ತು ದಾವಣಗೆರೆ ಜಿಲ್ಲಾ ಪತ್ರಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಚಂದ್ರು,ಅರುಣ್ ಕುಮಾರ್, ಎ.ನಿಂಗಪ್ಪ, ಬಸವರಾಜ, ಟಿ.ಪಿ. ನಾಗರಾಜ, ರಮೇಶ್ ಜೆ. ವತನ್, ದಿನೇಶ್ ಶೆಟ್ಟಿ, ಕುಮಾರಸ್ವಾಮಿ, ಕೃಷ್ಣಮೂರ್ತಿ, ಗಂಗಾಧರ,  ಮಂಜುನಾಥ್, ರಘು, ಸುಧಾಕರ್ ಹಾಗೂ ಎಲ್ಲಾ ಪತ್ರಿಕಾ ವಿತರಕರು ಇದ್ದರು.