ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ

ಕೋಲಾರ,ಡಿ,೩-ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಡಿಯಲ್ಲಿ ದೇಶದ ಜನತೆಗೆ ಸಾಮಾಜಿಕ ನ್ಯಾಯ, ಸಮಾನತೆ ನೀಡಲು ಸಾಧ್ಯ, ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಮೋದಿ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ತಾಲೂಕಿನ ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ರಾಜಕಲ್ಲಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞೆ ಭೋದಿಸಿ, ಭಾರತಿಯರ ನಿಷ್ಟೇ, ಪರಿಶ್ರಮ ನೋಡಿದರೆ ನಮ್ಮ ದೇಶ ಈ ಹಿಂದೆ ಎಂದೋ ಅಭಿವೃದ್ದಿ ಹೊಂದಬೇಕಾಗಿತ್ತು, ಆದರೆ ದೇಶಕ್ಕೆ ೨೦೧೪ರಲ್ಲಿ ನರೇಂದ್ರ ಮೋದಿ ಆಡಳಿತ ದೇಶಕ್ಕೆ ಸಿಕ್ಕ ಮೇಲೆ, ದೇಶದ ಅಭಿವೃದ್ದಿ ಅಭೂತಪೂರ್ವವಾಗಿದೆ, ಎಲ್ಲಾ ರಂಗಗಳಲ್ಲಿ ದೇಶವು ಅಭಿವೃದ್ದಿಗೊಳ್ಳುತ್ತಿದೆ, ದೇಶದ ೮೦ ಕೋಟಿ ಜನರು ನಮ್ಮ ಸರ್ಕಾರ ವಿವಿಧ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರದಲ್ಲಿ ತಾಯಂದಿರಿಗೆ, ಸಹೋದರಿಯರಿಗೆ ಹೆಚ್ಚಿನ ಮಹತ್ವ ನೀಡಿ ಯೋಜನೆಗಳು ರೂಪಿಸಿದೆ, ದೇಶದ ಹಾಗೂ ಕೋಲಾರ ಕ್ಷೇತ್ರದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ನೀಡಲಾಗಿದೆ, ಪ್ರತಿ ಬಡ ಹೆಣ್ಣು ಮಕ್ಕಳಿಗೆ ಉಚಿತ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್, ಗರೀಬ್ ಕಲ್ಯಾಣ ಯೋಜನೆಯಡಿ ೫ ಕೆ.ಜಿ. ಉಚಿತ ಅಕ್ಕಿ, ಸ್ವ-ಸಹಾಯ ಗುಂಪುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದ್ದೇವೆ ಎಂದರು.
ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಹೀಗೆ ಮುಂತಾದ ಸೇವೆಗಳು ಪಡೆದುಕೊಳ್ಳುತ್ತಿದ್ದೀರಿ, ಫಸಲ್ ಬೀಮಾ ಯೋಜನೆಯಡಿ ಒಳ್ಳೆಯ ಪರಿಹಾರ ಬರುತ್ತಿದೆ, ಗ್ರಾಮಗಳಲ್ಲಿ ಇನ್ನು ಯಾರು ಯಾರಿಗೆ ಯೋಜನಗಳು ತಲುಪಿಲ್ಲ ಹಂತವರಿಗೆ ಅಧಿಕಾರಿಗಳ ನೇರವಾಗಿ ಮನೆ ಮನೆಗೆ ತಲುಪಿಸುವಂತಹ ಕೆಲಸ ಆಗುತ್ತಿದೆ ಎಂದು ಹೇಳಿದರು.
ಶೆಟ್ಟಹಳ್ಳಿ ಪಿಡಿಓ ಅರ್ಚನ, ತಾಲ್ಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರಗೌಡ, ಓಹಿಲೇಶ್, ವಿಶಾಲಕ್ಷಿ, ಅನಿಲ್, ವೇಮಗಲ್ ಸಂಪತ್ ಕುಮಾರ್, ನವೀನ್, ಶಿವಮ್ಮ, ಅಪ್ಪಿ ನಾರಾಯಣಸ್ವಾಮಿ, ನಾಗೇಶ್ವರ್ ರಾವ್, ವೆಂಕಟರಾಮೇಗೌಡ, ವೆಂಕಟೇಶಪ್ಪ ಇದ್ದರು.