
ಕಲಬುರಗಿ,ಮಾ.10:ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಲಬುರಗಿ ಕೇಂದ್ರ ಸಂವಹನ ಇಲಾಖೆಯಿಂದ ಆಳಂದ ಗುರುಭವನದಲ್ಲಿ ಇದೇ ಮಾರ್ಚ್ 9 ರಿಂದ 13 ರವರೆಗೆ ಹಮ್ಮಿಕೊಳ್ಳಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ್ ಅವರು ಗುರುವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ಜನರ ಕಾಳಜಿಗಾಗಿ ಇದ್ದು, ಆಳಂದ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಸಾಕಷ್ಟು ಜನರಿಗೆ ಉಪಯುಕ್ತವಾಗಿವೆ. ಇದಕ್ಕಾಗಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಲಬುರಗಿ ಕೇಂದ್ರ ಸಂವಹನ ಇಲಾಖೆಯು ಛಾಯಾ ಚಿತ್ರ ಪ್ರದರ್ಶನವು ಆರ್ಥಪೂರ್ಣವಾಗಿದೆ ಆಯೋಜಿಸಿದೆ ಎಂದರು.
ಕೇಂದ್ರ ಸರ್ಕಾರದ ಎಂಟು ವರ್ಷಗಳ ಸೇವೆ, ಸುಶಾಸನ, ಗರೀಬ ಕಲ್ಯಾಣ ಯೋಜನೆ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಜಿ-20 ಶೃಂಗ ಸಭೆ, ಪ್ರಧಾನಮಂತ್ರಿಯವರ ವಿಷನ ಛಾಯಾಚಿತ್ರ ಪ್ರದರ್ಶನ-2047 ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಛಾಯಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಿ ಇದರ ಸದುಪಯೋಗ ಪಡೆಯಬೇಕು.
ಕಾರ್ಯಕ್ರಮದಲ್ಲಿ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ.ಎಸ್.ಟಿ. ಮಾತನಾಡಿ, ಮಾರ್ಚ್ 9 ರಿಂದ 13 ರವರೆಗೆ ಛಾಯಾ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇದಲ್ಲದೇ ಛಾಯಾಚಿತ್ರದ ಪ್ರದರ್ಶನದ ಜೊತೆಗೆ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ ಇಲಾಖೆ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿದ್ದು ಎಲ್ಲರಿಗೂ ಉಪಯುಕ್ತ ಮಾಹಿತಿ ದೊರೆಯಲಿದೆ. ಪ್ರತಿದಿನ ವಿವಿಧ ಇಲಾಖೆಗಳು ವೇದಿಕೆ ಕಾರ್ಯಕ್ರಮ ನಡೆಸಿಕೊಡಲಿದ್ದು, ಜಾಗೃತಿ ಜಾಥಾ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ಎಮ್.ಬಿ.ಹೆಚ್.ಜಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಭಾಷಣ, ರಂಗೋಲಿ, ಚಿತ್ರಕಲೆ, ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಎಸ್.ಎಮ್. ಜಾಧವ ಅವರು ಭಾವೈಕ್ಯತೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಆಳಂದ ಪುರಸಭೆ ಅಧ್ಯಕ್ಷ ರಾಜಶ್ರೀ, ಶ್ರೀಶೈಲ್, ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹದ ಅಧಿಕಾರಿ ಚಂದ್ರಮೌಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಆರೋಗ್ಯ ಇಲಾಖೆಯ ವಿಜಯಲಕ್ಷ್ಮೀ ನಂದಿಕೋಲ್‍ಮಠ, ಮಹಿಳಾ ಇಲಾಖೆಯ ಸುರೇಖಾ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲೋಹಿಯಾ ಕಲಾತಂಡ ಸಾಂಸ್ಕೃತಿಕ ಕಾರ್ಯಕ್ರಮದ ನೇರವೇರಿಸಿದರು. ದತ್ತಾತ್ರೇಯ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕಾಶಿನಾಥ ಬಿರಾದಾರ ಸ್ವಾಗತಿಸಿದರು. ನಾಗಪ್ಪ ಅಂಬಗೋಳ ವಂದಿಸಿದರು.