ಕೇಂದ್ರ ಸರ್ಕಾರದ ಯೋಜನೆಗಳು ಮನೆಮನೆಗೆ ಮುಟ್ಟಿಸಿ:ಕೂಚಬಾಳ

ತಾಳಿಕೋಟೆ:ಫೆ.12: ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಬಡ ಜನರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಬಡ ಬಗ್ಗರ ದೀನ ದಲಿತರ, ಮಹಿಳೆಯರ ಸಬಲಿಕರಣಕ್ಕಾಗಿ ತಂದ ಯೋಜನೆಗಳು ದೇಶವನ್ನು ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಏತ್ತುವಲ್ಲಿ ಸಹಾಯಕಾರಿಯಾಗಿದ್ದು ಹೀಗಾಗಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸುವಂತಹ ಕಾರ್ಯ ಮಾಡಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಹೇಳಿದರು.
ರವಿವಾರರಂದು ಪಟ್ಟಣದ ಬಜಾರ ಶ್ರೀ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮ ಚಲೋ ಅಭಿಯಾನದ ಅಂಗವಾಗಿ ಮನೆ ಮನೆಗೆ ಬಿಜೆಪಿ-ಮನಮನಕ್ಕೆ ಮೋದಿ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ ಭಾರತ್‍ವನ್ನು ಜಾರಿಗೆ ತಂದಿದೆ ದೇಶದ ಯಾವುದೇ ಆಸ್ಪತ್ರೆಯಲ್ಲಿ ಉಚಿತವಾಗಿ ಚೀಕೀತ್ಸೆ ಮತ್ತು ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ ಕೈಗೆಟಕುವ ದರದಲ್ಲಿ ಬಡ ಜನರಿಗೆ ಔಷಧಿ ಸಿಗಲಿ ಎಂಬ ಉದ್ದೇಶದಿಂದ ಜನೌಷಧಿ ಕೇಂದ್ರಗಳನ್ನು ಪ್ರಾರಂಬಿಸಲಾಗಿದೆ, ಕುಡಿಯುವ ನೀರಿನ ತೊಂದರೆ ದೇಶದ ಯಾವುದೇ ಒಬ್ಬ ನಾಗರಿಕನಿಗೂ ಬರಬಾರದು ಎಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ ಈಗಾಗಲೇ ಈ ಯೋಜನೆಗಳು ಸಾಕಾರದ ಹಂತದಲ್ಲಿವೆ ರೈತರ ಸಂಕಷ್ಟಗಳ ನಿವಾರಣೆಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಮಹಿಳಾ ಸಬಲೀಕರಣಕ್ಕಾಗಿ ಶಾಸನ ಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳಕ್ಕಾಗಿ ಶೇ. 33 ರಷ್ಟು ಮಿಸಲಾತಿಯ ಮೂಲಕ ನಾರಿ ಶಕ್ತಿ ಅಧಿನಿಯಮ ಜಾರಿಗೆ ತಂದಿದ್ದಾರೆ, ಹೊಗೆ ರಹಿತ ಮಹಿಳಾ ಮನೆಗಳಿಗಾಗಿ ಉಜ್ವಲಾಯೋಜನೆಯನ್ನು ಜಾರಿಗೆ ತಂದು ಉಚಿತವಾಗಿ ಗ್ಯಾಸ್ ಸಿಲೆಂಡರ್ ಸಂಪರ್ಕ ಒದಗಿಸಿ ಜನರಿಗೆ ಅನುಕೂಲ ಕಲ್ಪಿಸುವಂತಹ ಕಾರ್ಯ ಮಾಡಿದ್ದಾರೆ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ, ಅದರ ಜೊತೆಗೆ ಕೋವಿಡ್ ಸಂಕಷ್ಟದ ಸಂದರ್ಬದಲ್ಲಿ ಯಶಸ್ವಿ ನಿರ್ವಹಣೆಯೊಂದಿಗೆ ದೇಶದಲ್ಲಿಯೇ ಪರಿಣಾಮಕಾರಿಯಾದ ಲಸಿಕೆ ತಯಾರಿಕೆ, ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆ ನೀಡಿದ್ದಾರೆ, ದೇಶದ ರಕ್ಷಣೆಗಾಗಿ ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35ಎ ರದ್ದತಿ ಮಾಡುವ ಮೂಲಕ ದೇಶದ ತಿಲಕವೆಂಬುದನ್ನು ಸಾರಿದ್ದಾರೆ ಇದರ ಪರಿಣಾಮ ಇಂದು ಕಾಶ್ಮೀರದಲ್ಲಿ ಬಯೋತ್ಪಾದನೆ ನಿಗ್ರಹದ ಜೊತೆಗೆ ಶಾಂತಿ ಸೌಹಾರ್ದತೆಯ ಬಾಳ್ವೆ ಕಾಣುತ್ತಿದ್ದೇವೆಂದರು. ನಮ್ಮ ದೇಶಕ್ಕೆ ಸಂವಿದಾನದ ಕೊಡುಗೆಯನ್ನು ನೀಡಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸ್ಮರಣಾರ್ಥ 5 ಸ್ಥಳಗಳನ್ನು ಪಂಚತೀರ್ಥಗಳಾಗಿ ಅಭಿವೃದ್ದಿ ಮಾಡಲಾಗಿದೆ, ಡಿಜಿಟಲ್ ಬ್ಯಾಂಕಿಂಗ್ ಮೂಲಕ ನಗಧು ವರ್ಗಾವಣೆಗೆ ಒತ್ತು ನೀಡಿದ್ದರ ಫಲವಾಗಿ ಇಂದು ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಹಣ ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೇ ಜಮೆಯಾಗುವದನ್ನು ನಾವು ಕಾಣುತ್ತಿದ್ದೇವೆಂದರು. ದೇಶದ ಜನರ 500 ವರ್ಷಗಳ ಕನಸ್ಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಯೋಧ್ಯಾ ನಗರಿಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಾಣ ಮಾಡಿ ಭಹುಕೋಟಿ ಜನರ ಅಪೇಕ್ಷೆಯನ್ನು ಪ್ರಧಾನಿ ನರೇಂದ್ರ ಮೋಧಿಜಿ ಅವರು ಇಡೇರಿಸಿದ್ದಾರೆ ಇಂತಹ ಪ್ರಧಾನಿಯನ್ನು ಪಡೆದ ನಾವುಗಳು ದನ್ಯರಾಗಿದ್ದು ಪ್ರಧಾನಿ ಮೋದಿಜಿ ಅವರು ದೇಶದ ಅಭಿವೃದ್ದಿಗಾಗಿ ಕೈಗೊಂಡಿರುವ ಯೋಜನೆಗಳು ಮತ್ತು ನಿರ್ಧಾರಗಳು ಪ್ರತಿಯೊಬ್ಬರ ಮನೆ ಮನಗೆ ಮುಟ್ಟಿಸುವದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ರಾಜ್ಯಾಧ್ಯಂತ ಫೇ.9 ರಿಂದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಇದೇ ಸಮಯದಲ್ಲಿ ಬಜಾರ ಶ್ರೀ ಹನುಮಾನ ದೇವರಿಗೆ ಬಿಜೆಪಿ ನಗರ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತ್ತಲ್ಲದೇ ನಂತರ ಸಾಂಕೇತಿಕವಾಗಿ ಪಟ್ಟಣದ ವಾರ್ಡ ನಂ.9ರಲ್ಲಿ ಮನೆ ಮನೆಗೆ ಕಾರ್ಯಕರ್ತರು ಸಂಚರಿಸಿ ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರವನ್ನು ನೀಡಿದರು.
ಈ ಸಮಯದಲ್ಲಿ ಮಂಡಲದ ವಿಸ್ತಾರಕರಾದ ಮಾಣಿಕ ಹಿರಟ್ಟಿ, ಬಿಜೆಪಿ ಪಕ್ಷದ ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ಮುಖಂಡರುಗಳಾದ ಗೀರಿಶಗೌಡ ಪಾಟೀಲ(ನಾಲತವಾಡ), ಶ್ರೀಶೈಲ ದೊಡಮನಿ, ಮಹಾಂತೇಶ ಹಿರೇಮಠ, ಶಶಿಧರ ಡಿಸಲೆ, ಸಂತೋಷ ಬಾದರಬಂಡಿ, ಮಾನಸಿಂಗ್ ಕೊಕಟನೂರ, ಮಂಜುನಾಥ ಶೆಟ್ಟಿ, ಅಶ್ವೀನ ಬೇದರಕರ, ರಾಘವೇಂದ್ರ ಬಿಜಾಪೂರ, ನಾಗರಾಜ ಬಳಿಗಾರ, ಜೈಸಿಂಗ್ ಮೂಲಿಮನಿ, ರಾಘವೇಂದ್ರ ಮಾನೆ, ವಿಠ್ಠಲ ಮೋಹಿತೆ, ಕಾಶಿನಾಥ ಮುರಾಳ, ರವಿ ಕಟ್ಟಿಮನಿ, ಮಲ್ಲು ಮೇಟಿ, ಮಹಾಂತೇಶ ಮುರಾಳ, ಶ್ರೀಮತಿ ಸುವರ್ಣಾ ಬಿರಾದಾರ, ರಾಮು ಜಗತಾಪ, ಈಶ್ವರ ಹೂಗಾರ, ಒಳಗೊಂಡು ನೂರಾರು ಕಾರ್ಯಕರ್ತರು ಇದ್ದರು.