ಕೇಂದ್ರ ಸರ್ಕಾರದ “ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್” ವಿತರಿಸಿದ ಮಾಜಿ ಸಚಿವ ಶ್ರೀಮಂತ ಪಾಟೀಲ

ಕಾಗವಾಡ : ಡಿ.8:ಗ್ರಾಮೀಣ ಭಾಗದ ಮಹಿಳೆಯರು ಹೊಗೆ ಮುಕ್ತ ಜೀವನ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಎಲ್ಲ ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುತ್ತಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಅವರು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ “ಉಜ್ವಲ ಗ್ಯಾಸ್ ಸಿಲಿಂಡರ್” ವನ್ನು ಸಿದ್ದೇವಾಡಿ ಗ್ರಾಮದ ಬಂಡಗರ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾರ್ಡ್ ನಂ – 3 ಹಾಗೂ 2 ರ ಸುಮಾರು 55 ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ಸಿಲಿಂಡರ್ ವನ್ನು ಉಚಿತವಾಗಿ ಫಲಾನುಭವಿಗಳಿಗೆ. ವಿತರಿಸಿ ಮಾತನಾಡುತ್ತಿದ್ದರು ಉಜ್ವಲ ಯೋಜನೆಯನ್ನು ಪ್ರತಿ ಗ್ರಾಮದ ಪ್ರತಿ ಕುಟುಂಬಕ್ಕೆ ಮುಟ್ಟಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಕೇಂದ್ರ ಸರಕಾರ ಮಹಿಳೆಯರಿಗೆ, ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರ ಅವರ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ “ಉಜ್ವಲ ಗ್ಯಾಸ್ ಸಿಲಿಂಡರ್” ಯೋಜನೆಯನ್ನು ಸಿದ್ದೇವಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಅಶ್ವಿನಿ ಆಜೂರ, ಮಾರುತಿ ಖೋತ, ಸಿದರಾಯ ಕನಗಲೆ ಅವರು ಬಡವರಿಗೆ ತಲುಪಿಸುವಲ್ಲಿ ವಿಶೇಷವಾಗಿ ಪ್ರಯತ್ನಿಸಿದ್ದು ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸುತ್ತೇನೆ ಎಂದರು,

ಈ ಸಂದರ್ಭದಲ್ಲಿ ಮದಭಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾದೇವ ಕೋರೆ, ಸಿದ್ದೇವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾಲಿ ಚವ್ಹಾಣ,ಮಾಜಿ ಅಧ್ಯಕ್ಷೆ ಅಶ್ವಿನಿ ಆಜೂರ, ಇಂದುಮತಿ ಚವ್ಹಾಣ, ರಾಮ ಸೊಡ್ಡಿ, ಈಶ್ವರ ಕುಂಬಾರೆ, ಮಾಯಪ್ಪಾ ಖಿಲಾರೆ, ಮಾರುತಿ ಮಾನೆ, ದೊಂಡಿರಾಮ ಅವಳೇಕರ, ರಮೇಶ ಅವಳೇಕರ, ರಮೇಶ ಆಜೂರ, ಮಾರುತಿ ಖೋತ, ಸಿದರಾಯ ಕನಗಲೆ, ದಶರಥ ಖೋತ್, ಸಂಜು ಬಂಡಗರ, ಕೇದಾರಿ ಖಿಲಾರೆ, ಅಶೋಕ ಬಂಡಗರ, ಸಂಜು ಖಿಲಾರೆ, ಅಪ್ಪಾಸಾಬ ಬಂಡಗರ, ಸಂತೋಷ ಖೋತ, ಸೇರಿದಂತೆ ಹಲವರು ಉಪಸ್ಥಿತರಿದ್ದರು,