
ಕಲಬುರಗಿ,ನ 16:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವು ಹೈದರಾಬಾದ್‍ನನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್‍ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ನೈಪರ್ )
ಸಹಯೋಗದೊಂದಿಗೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ
ಪ್ರತಿಷ್ಠಿತ ಸಂಶೋಧನಾ ಅನುದಾನವನ್ನು ಭಾರತೀಯ ಕಡಲ ತೀರದ
ಕೋನಸ್ ಪೆಪ್ಟೈಡ್‍ಗಳಿಂದ ನೋವಿನ ಚಿಕಿತ್ಸಗೆ ಔಷಧಗಳು ಎಂಬ ಸಂಶೋಧನಾ
ಯೋಜನೆಗೆ ಪಡೆದಿದೆ. ಅನುದಾನದ ಒಟ್ಟು ಮೊತ್ತ ರೂ. 89,58,600. ಸಿಯುಕೆಯ
ರಸಾಯನಶಾಸ್ತ್ರ ವಿಭಾಗದ ಪೆÇ್ರ. ಕೊಂಕಲ್ಲು ಹನುಮೇಗೌಡ ಮತ್ತು
ಹೈದರಾಬಾದ್‍ನ ನೈಪರ್‍ನ ಫಾರ್ಮಾಸ್ಯುಟಿಕಲ್ ವಿಶ್ಲೇಷಕ ಡಾ.ರಾಜೇಶ್ ಸೋಂಟಿ
ಯೋಜನೆಯ ಪ್ರಮುಖ ಸಂಶೋಧಕರಾಗಿದ್ದಾರೆ. ಡಾ. ಮನೋಜ್ ಪಾಂಡುರಂಗ್
ದಾಂಡೇಕರ್ ಮತ್ತು ಡಾ. ಚಂದ್ರಯ್ಯ ಗೊಡುಗು, ಜೈವಿಕ ವಿಜ್ಞಾನ, ನೈಪರ್
ಹೈದರಾಬಾದ್, ಯೋಜನೆಯ ಸಹ- ಸಂಶೋಧಕರಾಗಿದ್ದಾರೆ ಎಂದು ಜೈವಿಕ
ತಂತ್ರಜ್ಞಾನ ಇಲಾಖೆಯ ಮಂಜೂರಾತಿ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರಿಕೆಗಳಿಗೆ ಮಾತನಾಡಿದ ಪೆÇ್ರ. ಹನುಮೇಗೌಡರು, ದೀರ್ಘಕಾಲದ ನೋವು
ಪ್ರಪಂಚದಾದ್ಯಂತ ಅನೇಕ ಜನರ ಜೀವನದ ಗುಣಮಟ್ಟವನ್ನು ಕ್ಷೀಣಿಸುವಂತೆ
ಮಾಡಿದೆ. ನೋವಿನಿಂದ ಬಳಲುವುದು ಅತ್ಯಂತ ಕರುಣಾಜನಕ ಮತ್ತು ಅನಪೇಕ್ಷಿತ
ಪರಿಸ್ಥಿತಿಯಾಗಿದೆ. ಸದ್ಯ ನೋವು ಚಿಕಿತ್ಸೆಯಲ್ಲಿ ಒಪಿಯಾಡ್‍ಗಳನ್ನು
ಬಳಸಲಾಗುತ್ತಿದೆ. ಇವುಗಳ ದೀರ್ಘಾವಧಿಯ ಬಳಕೆಯಿಂದ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಆದ್ದರಿಂದ, ನೋವು ನಿರ್ವಹಣೆಗೆ ಪರ್ಯಾಯ ಚಿಕಿತ್ಸೆಗಳ ತುರ್ತು
ಅವಶ್ಯಕತೆಯಿದೆ. ಸಮುದ್ರದ ದಡದಲ್ಲಿರುವ ಬಸವನ ಹುಳುಗಳಕೊನೊಟಾಕ್ಸಿನ್‍ಗಳು ವೈವಿಧ್ಯಮಯ ಪೆಪ್ಟೈಡ್‍ಗಳ ಸಮೃದ್ಧ ಮೂಲವಾಗಿವೆ.ಇವು ದೀರ್ಘಕಾಲದ ನೋವಿನ ನಿಯಂತ್ರಣಕ್ಕೆ ಸಹಕಾರಿಯಾಗಿವೆ ಎಂಬುದು ಸಾಬೀತಾಗಿದೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪೆÇ್ರ.ಪಿ.ಬಲರಾಮ್ ಅವರ ದಶಕಗಳ ಸಂಶೋಧನೆ ಮತ್ತು ಪೆÇ್ರ.ಕೆ.ಎಸ್.ಕೃಷ್ಣನ್‍ಅವರು ಭಾರತೀಯ ಸಾಗರದ ಕೋನ್ ಬಸವನ ಹುಳಗಳಿಂದಕೊನೊಪೆಪ್ಟೈಡ್‍ಗಳ ವಿಶಿಷ್ಟ ಪೆಪ್ಟೈಡ್ ಅನುಕ್ರಮಗಳನ್ನು ಪಡೆದಿದ್ದಾರೆ.ಎಂದು ಅವರು ಹೇಳಿದರು. ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ್ ಕುಲಸಚಿವ ಪೆÇ್ರ. ಅರ್ ಆರ್ ಬಿರದಾರ ಅವರು ಸಿಯುಕೆಪ್ರಾಧ್ಯಾಪಕರಿಗೆ ಅನುದಾನ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.