ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಭೇಟಿಯಾದ ಡಾ.ನಸೀರ್ ಅಹ್ಮದ್

ದಾವಣಗೆರೆ.ನ.೨೨; ಸಿಂಡಿಕೇಟ್ ಬ್ಯಾಂಕ್ ಮಾಜಿ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ನಗರದ ಡಾ.ಸಿ.ಅರ್. ನಸೀರ್ ಅಹ್ಮದ್ ಇತ್ತೀಚೆಗೆ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ  ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಸಿಂಗ್ ಲಾಯ್ಪುರ್ ಅವರನ್ನು ಅವರ ಕಛೇರಿಯಲ್ಲಿ ಭೇಟಿಯಾದರು.ಆ ಸಮಯದಲ್ಲಿ ಅವರು ಹಲವಾರು ಸಮಸ್ಯೆಗಳು ಮತ್ತು ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದರು.  ಅದರಲ್ಲೂ ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ವಿಶೇಷವಾಗಿ ಹೊಸ ಕಲ್ಯಾಣ ಯೋಜನೆಗಳ ಅನುಷ್ಠಾನ ಮತ್ತು 2020-21 ಮತ್ತು 2021-22 ರ ಅವಧಿಯಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತರ ಬಜೆಟ್ ಅನ್ನು ಕಡಿಮೆ ಆಗಿರುವುದನ್ನು ಅವರ ಗಮನಕ್ಕೆ ತಂದರು,  ಕೇಂದ್ರ ಸಚಿವ ನಖ್ವಿ  ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದು  ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.