ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ಮತದಾನ

ಔರಾದ : ಮೇ.10:ಪ್ರಜಾಪ್ರಭುತ್ವದ ಹಬ್ಬವಾದ 2023ರ ವಿಧಾನಸಭಾ ಚುನಾವಣೆ ಪ್ರಯುಕ್ತ ಇಂದು ಬೆಳಿಗ್ಗೆ ಕೇಂದ್ರ ರಾಜ್ಯ ಸಚಿವ ಭಗವಂತ ಖೂಬಾ ಅವರು ಔರಾದ ಪಟ್ಟಣದ ಬೂತ್ ನಂ.83ರಲ್ಲಿ ದಂಪತಿ ಸಹಿತವಾಗಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಬೇಕು ಒಂದೇ ಒಂದು ಮತ ದಕ್ಷ ಆಡಳಿತ ಹಾಗೂ ಸಮೃದ್ಧ ಭಾರತ ಕಟ್ಟುವ ಶಕ್ತಿ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಶರಣಪ್ಪ ಪಂಚಾಕ್ಷರಿ, ಬಂಡೆಪ್ಪ ಕಂಟೆ, ಅಮರ ಎಡವೆ, ಶ್ರೀನಿವಾಸ್ ಖೂಬಾ, ಸಚಿನ ಎಡವೆ, ಯಾದುರಾವ ಮೇತ್ರೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.