ಕೇಂದ್ರ ಸಚಿವ ನಾರಾಯಣ ಸ್ವಾಮಿ ಬಗ್ಗೆ ಅವಹೇಳನ ಸರಿಯಲ್ಲ

ಜಗಳೂರು.ಸೆ.೧೪;  ಮಾದಿಗ ಸಮಾಜದ ನಾಯಕ ನಾರಾಯಣ ಸ್ವಾಮಿ ಅವರು ಕೇಂದ್ರ ಸಚಿವರು ಆಗಿರುವುದನ್ನು ಲಂಬಾಣಿ ಸಮಾಜದವರು ಸಹಿಸದೇ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಖಂಡನೀಯ ಎಂದು ತಾಲ್ಲೂಕು  ಆದಿ ಜಾಂಭವ ಸಮಾಜದ ಗೌರವಾಧ್ಯಕ್ಷ ಜಿ.ಎಚ್.ಶಂಭುಲಿಂಗಪ್ಪ ಹೇಳಿದರು. ಪಟ್ಟಣ್ಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿಗೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿಗೆ ಆಗಮಿಸಿದ್ದ ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ ಬಗ್ಗೆ ಲಂಬಾಣಿ ಜನಾಂಗ ಅವಹೇಳನಕಾರಿ ಪದ ಬಳಸಿರುವುದು ಸಮಾಜದಲ್ಲಿ ಅಶಾಂತಿ ಮೂಡಿಸಲಿದೆ ಈ ಕೂಡಲೇ ಕ್ಷಮೆ ಕೇಳದೇ ಹೋದರೆ ರಾಜ್ಯಾಧ್ಯಂತ ಮಾದಿಗ ಸಮಾಜ ಅವರ ವಿರುದ್ದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರುಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಲಾಗುತ್ರಿದ್ದೆ ಅದರ ಸಾಧಕ ಭಾಧಕಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ಇದೆ ಈ ವರದಿ ನ್ಯಾಯಬದ್ದವಾಗಿ ಜಾರಿಮಾಡಲು ನಾರಾಯಣ ಸ್ವಾಮಿ ಆಸಕ್ತಿ ತೋರುತ್ತಿದ್ದಾರೆ   ಒಳ ಮೀಸಲಾತಿ ಆತಂಕದಲ್ಲಿರುವ ಕೊಲೊಂಬೋ ಜಾತಿಗಳು       ಅಂತವರ ಬಗ್ಗೆ ಅಪೇಕ್ಷ ಮಾತುಗಳು ಆಡಿರುವುದರ ಹಿಂದೆ ಅವರ ರಾಜಕೀಯ ಶಕ್ತಿ ಕುಂದಿಸಿ  ಮಾದಿಗ ಸಮಾಜ‌ದ ನಾಯಕರನ್ನ ಅವಮಾನಿಸುವ   ಹುನ್ನಾರ ನೆಡುಸುತ್ತಿದ್ದಾರೆ ಎಂದರು 2005 ರಲ್ಲಿನ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನೇತೃತ್ವದಲ್ಲಿ ಸದಾಶಿವ ಆಯೋಗ ರಚನೆ ಮಾಡಿ ಮೂಲ ಅಸ್ಪುಶ್ಯರಿಗೆ ಸಂವಿಧಾನ ಬದ್ದ ಹಕ್ಕು ನೀಡಲು ಆಯೋಗದಲ್ಲಿ ತಿಳಿಸಲಾಗಿದೆ ವರದಿ ವೈಜ್ಞಾನಿಕ ವಾಗಿದ್ದರು ಸಹ ಇಲ್ಲಿಯವರಿಗೆ ಆಡಳಿತ ನೆಡೆಸಿದ ಯಾವುದೇ ಸರ್ಕಾರ ಜಾರಿಗೆ ತರಲು ಮುಂದಾಗಿಲ್ಲ‌   ಮಾನ್ಯ ಪ್ರಧಾನ‌ ಮಂತ್ರಿಗಳು ಹಾಗು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಶೀಘ್ರವೇ ಜಾರಿಗೆ ಗೊಳಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಜಿ.ಹೆಚ್.ಮಹೇಶ್ ,ಹನುಮಂತಾಪುರ ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ. ಹಟ್ಟಿ ತಿಪ್ಪೇಸ್ವಾಮಿ. ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುನಾಥ್. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮರೇನಹಳ್ಳಿ ಹೊನ್ನೂರಪ್ಪ .ಬಿ.ಸತೀಶ್.ಶಿವಮೂರ್ತಿ. ಚಂದ್ರಪ್ಪ.ಜೀವನ್ ಇದ್ದರು.