ಕೇಂದ್ರ ಸಚಿವ ಜೋಶಿಗೆ ಜಯ

ಹುಬ್ಬಳ್ಳಿ, ಜೂ. ೪: ಬಿಜೆಪಿ ತನ್ನ ಭ್ರದ್ರಕೋಟೆಯಾಗಿ ಕಟ್ಟಿಕೊಂಡಿದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ಬಾವುಟ ಹಾರಿಸಿದ್ದು, ನಾಲ್ಕುಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಸಲವೂ ಐದನೇ ಬಾರಿಗೆ ಜಯಶಾಲಿಯಾಗಿದ್ದಾರೆ.ಪ್ರಹ್ಲಾದ ಜೋಶಿಯವರು ಹೆಚ್ಚಿನ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಯವರನ್ನು ಪರಾಭವಗೊಳಿಸಿ ಜಯಗಳಿಸಿದ್ದಾರೆ.ಉತ್ತರ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಧಾರವಾಡ ಲೋಕಸಭಾ ಕ್ಷೇತ್ರ ಇಲ್ಲಿ ಯಾರೇ ಗೆಲುವು ಸಾಧಿಸಿದರೂ ಇತಿಹಾಸ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ತೀವ್ರ ಕುತೂಹಲವನ್ನಂತೂ ಕೆರಳಿಸಿತ್ತು.ಆದರೆ ಇಂದು ಫಲಿತಾಂಶ ಹೊರಬಿದ್ದಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಜಯ ತನ್ನದಾಗಿಸಿಕೊಂಡಿದೆ.