ಕೇಂದ್ರ ಸಚಿವ ಅಥಾವಳೆಗೆ‌‌‌ ಕೊರೊನಾ

ಮುಂಬೈ, ಅ .27-ಕೇಂದ್ರ ಸಚಿವ ರಾಮ್ ದಾಸ್ ಅಥಾವಳೆ ಅವರಿಗೆ‌ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಿಪಬ್ಲಿಕನ್ ಆಫ್ ಇಂಡಿಯಾ ಪಕ್ಷದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಮಯೂರ್ ಬಾರ್ಕರ್ ಈ ಕುರಿತು ಮಾಹತಿ ಒದಗಿಸಿದ್ದಾರೆ. ಅಥಾವಳೆ ವರದಿಯಲ್ಲಿ ಪಾಸಿಟಿವ್ ಬಂದಿದ್ದು ಅವರನ್ನು ಬಾಂಬೆ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ ಎಂದ ಹೇಳಿದ್ದಾರೆ.
ಕಳೆದ ಫೆಬ್ರವರಿ ಯಲ್ಲಿ ಗೋ ಕೊರೊನಾ ಗೋ ಎಂದು‌‌ ಅಥಾವಳೆ ಹೇಳಿದ್ದರು.‌ಈಗ ಅವರಿಗೆ ಸೋಂಕು ಪಾಸಿಟೀವ್ ವರದಿ ಬಂದಿದೆ.
ಚಲನಚಿತ್ರ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಚಾರ ಆರೋಪ ಹೊರಿಸಿರುವ ನಟಿ ಪಾಯಲ್ ಘೋಶ್ ನಿನ್ನೆಯಷ್ಟೆ ಪಕ್ಷಕ್ಕೆ ‌ಸೇರ್ಪಡೆಗೊಂಡಿದ್ದರು.ಅಥಾವಳೆ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿತ್ತು.‌ಈಗ ಅವರಿಗೂ ಭೀತಿ ಕಾಡುತ್ತಿದೆ.