ಕೇಂದ್ರ ಸಚಿವರಿಂದ ಬೋಟಿಂಗ್ ಉತ್ಸವಕ್ಕೆ ಚಾಲನೆ

ಬೀದರ್,ಜ.7-ಕರ್ನಾಟಕದ ಮುಕುಟಪ್ರಾಯವಾಗಿರುವ ಬೀದರ್ ನಗರದಲ್ಲಿ “ಬೀದರ್ ಉತ್ಸವ-2023″ರ ಅಂಗವಾಗಿ ಕೋಟೆ ಆವರಣದ ಬೊಮ್ಮಗೊಂಡೇಶ್ವರ ಕೆರೆಯಲ್ಲಿ ಆಯೋಜಿಸಿದ್ದ ಬೋಟಿಂಗ್ ಉತ್ಸವಕ್ಕೆ ಕೇಂದ್ರ ನೂತನ,ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಇಂದು ಚಾಲನೆ ನೀಡಿದರು.
ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ರಘನಾಥರಾವ ಮಲ್ಕಾಪುರೆ, ಬೂಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್.ಪಿ., ಜಿಲ್ಲಾ ಪಂಚಾಯಿತಿ ಸಿಇಒ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.