ಕೇಂದ್ರ ಸಚಿವರನ್ನು ಭೇಟಿಯಾದ ಗೊಂಡ (ಎಸ್ಟಿ) ಸಮಾಜದ ಮುಖಂಡರು

ಬೀದರ್:ಫೆ.08: ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿನ ಗೊಂಡ (ಎಸ್ಟಿ) ಪರ್ಯಾಯ ಪದ ಕುರುಬ ಹಾಗೂ ರಾಜ್ಯದಲ್ಲಿನ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗೊಂಡ (ಎಸ್ಟಿ), ಕುರುಬ ಸಮಾಜದ ಮುಖಂಡರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಅರ್ಜುನ ಮುಂಡಾ, ಅರ್ಜುನ್ ರಾಮ್ ಮೇಘ್ವಾಲ್, ಭಗವಂತ ಖೂಬಾರವರನ್ನು ಹಾಗೂ ಆರ್.ಜಿ.ಐ ಅಧಿಕಾರಿಗಳನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿದ ಅವರು, ಕೇಂದ್ರ ಸಚಿವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ್ದು, ಚರ್ಚೆಯ ವೇಳೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಗೊಂಡ ಹಾಗೂ ಕುರುಬ ಸಮಾಜದ ಪ್ರಮುಖರಾದ ಮಾಳಪ್ಪ ಅಡಸಾರೆ, ರುದ್ರಣ್ಣ ಗೂಳಗೂಳಿ, ಪುರುμÉೂೀತ್ತಮ್ ರವರು ಸೇರಿದಂತೆ ಅನೇಕರಿದ್ದರು.