ಕೇಂದ್ರ ಸಂವಹನ ಇಲಾಖೆಯಿಂದ ಛಾಯಾಚಿತ್ರ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜು13: ಜಾಗತಿಕ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚೆರ್ಚಿಸಿ ಅವುಗಳನ್ನು ಪರಿಹರಿಸುವ ಮೂಲಕ ಪರಿಹಾರ ಕಾಣಲು ಆಗುವ ಸಭೆ ನಮ್ಮ ಭಾಗದಲ್ಲಿ ನಡೆಯುತ್ತಿರುವುದು ಸಂತಸದ ವಿಷಯ ಎಂದು ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ಜಿ.ತುಕಾರಾಮಗೌಡ ಹೇಳಿದರು.
ಅವರು ಗುರುವಾರ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆಯಿಂದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಭೂಮಿ ಒಂದು ಕುಟುಂಬ ಎಂಬ ತತ್ವದಲ್ಲಿ ಭಾರತ ಈ ಭಾರಿಯ ಜಿ20ಶೃಂಗಾಸಭೆಯ ಅಧ್ಯಕ್ಷತೆ ವಹಿಸಿದೆ ಎಂದರು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೊರೆತಿರುವುದು ಸುಧೈವ ಎಂದು ಭಾರತ ಇದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದರು.
ಭಾರತದ ಜಿ-20 ಅಧ್ಯಕ್ಷತೆ ಹಾಗೂ ಕೇಂದ್ರ ಸರ್ಕಾರದ 9 ವರ್ಷಗಳ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಆರೋಗ್ಯ ಕಲ್ಯಾಣಕ್ಕಾಗಿ ಜನೋ ಔಷಧ ಕೇಂದ್ರ, ಕರೋನಾ ನಿರ್ವಹಣೆ ಸೇರಿದಂತೆ ಕಳೆದ 9ವರ್ಷ ಕೇಂದ್ರದ ಮಹತ್ವದ ಯೋಜನೆಗಳನ್ನು ಏಳೆ ಏಳೆಯಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಸವರಾಜ್ ತಿಳಿಸಿದರು.
ಜನ ಕಲ್ಯಾಣ ಕುರಿತು ಛಾಯಾಚಿತ್ರ ಪ್ರದರ್ಶನ ಹಾಗೂ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಎ.ಲತಾ ನಗರಸಭಾಧ್ಯಕ್ಷೆ ನೆರವೇರಿಸುವರು,  ಅಧ್ಯಕ್ಷತೆಯನ್ನು ಪ್ರಾಂಶುಪಾಲ ಕೆ. ಶಿವಪ್ಪ ಅವರು ವಹಿಸಿದ್ದರು, ಕೇಂದ್ರ ಸಂವಹನ ಇಲಾಖೆಯ ನಿರ್ದೇಶಕಿ ಪಲ್ಲವಿ ಚಿಣ್ಯಾ,   ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ,
ಶಿಶು ಅಭಿವೃದ್ಧಿ ಅಧಿಕಾರಿ ಅಂಬುಜಾ ಪಾಲ್ಗೊಂಡಿದ್ದರು.

@12bc = ವಾರ್ತಾ ಇಲಾಖೆಯ ಕಾರ್ಯಕ್ರಮಕ್ಕೆ ವಾರ್ತಾಧಿಕಾರಿ ಧನಂಜಯ್ಯ ಗೈರು.
ಸಭೆ ಸಮಾರಂಭ ಸೇರಿದಂತೆ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಗೈರಾಗುವುದು ಸಾಮಾನ್ಯ. ಕಾರ್ಯಕ್ರಮ ಆಯೋಜಿಸುವ ಅದು ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಬೇಕಾದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಹಾಯಕ ನಿರ್ದೇಶಕ ಧನಂಜಯ್ಯ ಜಿ-20ಶೃಂಗಸಭೆಯ ಪೂರ್ವಭಾವಿಯಾಗಿ ನಗರದ ಶ್ರೀ ಶಂಕರ ಆನಂದಸಿಂಗ್  ಸರ್ಕಾರಿ ಪ್ರಥಮ ದರ್ಚೆ ಕಾಲೇಜಿನಲ್ಲಿ  ಆಯೋಜಿಸಿರುವ ಕಾರ್ಯಕ್ರಮಗಳ ವರದಿ ಇತ್ಯಾದಿಗಳನ್ನು ಮುಂದೆ ನಿಂತು ಪ್ರಚಾರ ಮಾಡಬೇಕಾದ ಅವರು ತಮ್ಮ ವಾರ್ತಾ ಇಲಾಖೆಯೇ ನಿರ್ವಹಿಸಬೇಕಾದ ಕಾರ್ಯಕ್ರಮಕ್ಕೂ ಗೈರಾಗುವ ಮೂಲಕ ಅಷ್ಟೇ ಏಕೆ ಇಲಾಖೆಯ ಯಾವುದೆ ಒಬ್ಬ ಸಿಬ್ಬಂದಿಯು ಬಾರದಿರುವುದು ತಮ್ಮ ಕರ್ತವ್ಯ ಬದ್ದತೆಯನ್ನು  ಪ್ರದರ್ಶಿಸಿದರು.