ರಾಯಚೂರು,ಜು.೦೨-
ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತೀ ಹಿಂದುಳಿದ ರಾಯಚೂರ ಜಿಲ್ಲೆಗೆ ಕೇಂದ್ರದ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು.ಹಿರಿಯ ರಾಜಕೀಯ ನಾಯಕ,ದಕ್ಷ ಮತ್ತು ಪ್ರಾಮಾಣಿಕ ಅಭಿವೃದ್ದಿ ಹರಿಕಾರರಾದ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಡಬೇಕು ಎಂದು ರೈಲ್ವೆ ಬೋರ್ಡ್ ಸದಸ್ಯ ಮತ್ತು ರಾಯಚೂರ ಬಿಜೆಪಿ ಪಕ್ಷದ ಉಪಾಧ್ಯಕ್ಷ ಬಾಬುರಾವ್ ಅವರು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಪರಿಶಿಷ್ಠ ಪಂಗಡದ ಈ ನಾಯಕನಿಗೆ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು.ಈ ಪ್ರಾಂತದಲ್ಲಿ ಎಸ್ಟಿ ಸಮಾಜದ ಜನಸಂಖ್ಯೆ ಬಹಳಷ್ಟು ಇದೆ. ಬಹುತೇಕ ಶಾಸನ ಸಭೆಯ ಎಸ್ಟಿ ಮೀಸಲಾಗಿವೆ. ರಾಜಾ ಅಮರೇಶ್ವರ ನಾಯಕರಂತಹ ಹಿರಿಯ, ಪಕ್ಷ ಸಂಘಟನೆಯ ಮತ್ತು ರಾಯಚೂರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಮತ್ರು ರಾಷ್ಟ್ರೀಯ ಹೆದ್ದಾರಿ, ಅಭಿವೃದ್ದಿಯಲ್ಲಿ ಇವರ ಹಗಲಿರುಳು ಪರಿಶ್ರಮ,ಕರ್ತವ್ಯದಕ್ಷತೆ ಜಾಸ್ತಿಯಿದ್ದು, ಈ ಧೀಮಂತ ನಾಯಕನಿಗೆ ಸಂಪುಟ ಪುನರ್ ರಚನೆಯಲ್ಲಿ ಉತ್ತಮ ಖಾತೆ ನೀಡಿ,ಪಕ್ಷ ಮತ್ತು ಅಭಿವೃದ್ದಿಗೆ ಒತ್ತು ಒದಗಿಸಲು ಆಗ್ರಹಿಸಿದ್ದಾರೆ.
ರಾಯಚೂರ ಜಿಲ್ಲೆಯು ನೀತಿ ಆಯೋಗದ ಅಭಿವೃದ್ದಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಸಚಿವ ಸ್ಥಾನ ಕಲ್ಪಿಸುವುದರಿಂದ ಸಮಗ್ರ ಲೋಕಸಭಾ ಕ್ಷೇತ್ರ ಅಭಿವೃದ್ದಿಗೆ ರಹದಾರಿಯಾಗುತ್ತದೆ ಎಂದು ಗಮನಕ್ಕೆ ತಂದಿದ್ದಾರೆ ಎಂದರು.