ಕೇಂದ್ರ ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಆಳಂದ:ಮಾ.27:ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂಸುಧಾರಣೆ ಎಪಿಎಂಸಿ ಕಾಯ್ದೆ ವಿದ್ಯುತ್ ಹಾಗೂ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ರೈತರ ಹಾಗೂ ಜನವಿರೋಧಿ ಕಾಯ್ದೆಗಳು ರದ್ದು ಮಾಡಬೇಕು ಹಾಗೂ ಗಗನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಇಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಛೇರಿವರೆಗೂ ಪಾದ ಯಾತ್ರೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು ನಂತರ ಮಾತನಾಡಿದ ರೈತ ಮುಖಂಡ ರಮೇಶ ಲೋಹಾರ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹಾಗೂ ಮೂಲಕ ರೈತರಿಗೆ ಕೂಲಿ ಕಾರ್ಮಿಕರಿಗೆ ಜನರಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ ಒಂದು ಕಡೆ ಗಗನಕ್ಕೆ ಏರುತ್ತಿರುವ ತೈಲ ಬೆಲೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಇದರಿಂದ ಎಲ್ಲಾ ದಿನಸಿ ಬೆಲೆ ಏರಿ ಬಡ ಜನರು ಬಿದಿಗೆ ಬಿಳುತ್ತಿದ್ದಾರೆ.ಕೂಡಲೇ ಇದನ್ನು ನಿಯಂತ್ರಣ ಮಾಡಬೇಕೆಂದು ಅವರು ಆಗ್ರಹಿಸಿದರು.ಕೇಂದ್ರ ಸರ್ಕಾರ ಈ ಕಾಯ್ದೆಗಳ ಖಾಸಗೀಕರಣದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದವರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೊಗಿದರು. ಈ ಸಂದರ್ಭದಲ್ಲಿ ಚಂದ್ರಕಾಂತ ಚೋಪ್ರಾ ಪಾಂಡುರಂಗ ಮಾವಿನಕೆರೆ ಕಲ್ಯಾಣಿ ತುಕ್ಕಾಣಿ ದತ್ತಾತ್ರೇಯ ಕಬಿಡೆ ಆಸ್ಫಾಕ್ ಮುಲ್ಲಾ ಕಲ್ಮೆಶ ಅವಟೆ ಇತರರು ಇದ್ದರು.