ಕೇಂದ್ರ ರಾಜ್ಯ ಸರ್ಕಾರ ಎಸ್ ಟಿ ಸಮುದಾಯದ ಕಲ್ಯಾಣಕ್ಕೆ ಒತ್ತು ನೀಡಿದೆ: ಭಗವಂತ ಖೂಬಾ

ಹುಮನಾಬಾದ್:ಮಾ.14: ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಸ್ ಟಿ ಒತ್ತು ನೀಡಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ ಖೂಬಾ ಇಲ್ಲಿಯ ಭವಾನಿ ಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದೆ ಎಸ್ ಟಿ ಮೋರ್ಚಾ ಸಮಾವೇಶದಲ್ಲಿ ದೇಶವನ್ನು ಸುದೀರ್ಘವಾಗಿ ಆಳಿದ ಕಾಂಗ್ರೆಸ್ ಸರ್ಕಾರ ಎಸ್ ಸಿ ಎಸ್ ಟಿ ಜನಾಂಗದ ಕಲ್ಯಾಣಕ್ಕೆ ನಿರ್ಲಕ್ಷ ವಹಿಸಿದೆ ಎಂದರು. ಹುಮನಾಬಾದ ಶಾಸಕರು ನನ್ನ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಸಂಸದರು ಕೇವಲ ಮಂದಿರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕುರ್ಜಿ ಹಾಕಿರುವುದೆ ಸಾಧನೆಯೆಂದು ಟೀಕಿಸುತ್ತಿರುವುದನ್ನು ಖಂಡಿಸಿದರು. ಬೀದರ ಕಲಬುರಗಿ ಡೇಮೊ ರೈಲು ಲೈನ. ಹೆದ್ದಾರಿ ಬೈಪಾಸ್ ರಸ್ತೆ. ಸೇರಿದಂತೆ ಹಲವಾರು ಅಭಿವೃಧಿ ಕಾರ್ಯಗಳನ್ನು ಮಾಡಿರುವುದನ್ನು ಅವರ ಕಣ್ಣಿಗೆ ಕಾಣಿಸುತ್ತಿ ಎಂದರು. ನಾನು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವೆ ಅವರಂತೆ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುತ್ತಿಲ್ಲಾ ಎಂದು ಭಗವಂತ ಖೂಬಾ ಟೀಕಿಸಿದರು. ಪಶು ಸಂಗೋಪನ ಸಚಿವ ಪ್ರಭು ಚೌಹಾಣ್ ಮಾತನಾಡಿ ರಾಜ್ಯದಲ್ಲಿ ಮತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಕಾರ್ಯಕರ್ತರು ಎರಡು ತಿಂಗಳ ಶ್ರಮವಹಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ ಆಯ ವಿಧಾನ ಸಭ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶಗಳನ್ನು ಹಮ್ಮಿ ಕೋಡಲಾಗುತಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪುರೆ.ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್. ಮರ್ಚಾ ಸಂಚಾಲಕ ಈಶ್ವರ್ ಸಿಂಗ್ ಠಾಕೂರ್ ಮಾತನಾಡಿದರು. ಮಾಜಿ ಶಾಸಕ ಸುಭಾಷ ಕಲ್ಲೂರ. ಶೈಲೇಂದ್ರ ಬೆಲ್ದಾಳೆ. ಬಿಜೆಪಿ ಮುಖಂಡ ಸಿದ್ದು ಪಾಟೀಲ. ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಮಹೇಶ ಪಾಲಮ್ಮ. ಸಹ ಸಂಚಾಲಕ ಸುರೇಶ ಬಿರಾದರ. ಎಲ್ಲಾ ತಾಲೂಕಿನ ಮೋರ್ಚಾ ಅಧ್ಯಕ್ಷರು ಉಪಸ್ಥಿತರಿದ್ದರು ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ನಾರಾಯಣ ರಾಮಪೂರೆ ಪಕ್ಷಕ್ಕೆ ಸೆರರ್ಪಡೆ ಗೊಂಡರು ಇವರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಆರಂಭದಲ್ಲಿ ಪ್ರಕಾಶ ತಾಳಮಡಗಿ ಸ್ವಾಗತಿಸಿದರು ತಾಲೂಕ ಎಸ್ ಟಿ ಮೋರ್ಚಾ ಅಧ್ಯಕ್ಷ ದಯಾನಂದ್ ಮೇತ್ರಿ ಕೊನೆಯಲ್ಲಿ ವಂದಿಸಿದರು