ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯನ್ನು ಮನೆ ಮನೆಗೆ ತಿಳಿಸಿ: ಸದಾನಂದಗೌಡ

ಪಿರಿಯಾಪಟ್ಟಣ: ಮಾ.04:- ಈ ಹಿಂದೆಯೂ ಸಹ ಪಿರಿಯಾಪಟ್ಟಣ ಕ್ಷೇತ್ರ ಬಿಜೆಪಿ ಪಕ್ಷಕ್ಕೆ ಆಶ್ರಯ ನೀಡಿದ ಕ್ಷೇತ್ರವಾಗಿದ್ದು ಈ ಸಾರಿಯು ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ಮೋದಿ ಸಾಧನೆಯೆನ್ನು ಮನೆಮನೆಗೆ ತಿಳಿಸುವ ಕಾರ್ಯವಾಗಬೇಕು ಎಂದು ಕಾರ್ಯಕರ್ತ ಬಂಧುಗಳಿಗೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮನವಿ ಮಾಡಿದರು.
ಅವರಿಂದು ಪಿರಿಯಾಪಟ್ಟಣದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಈ ರಾಜ್ಯದ ಜನತೆ ಮನಗಾಣಿದ್ದು ಈ ಸಾರಿ ನಾವು ಎಲ್ಲಾ 120 ಕ್ಷೇತ್ರಗಳಲ್ಲಿ ಭರ್ಜರಿ ಸಾಧಿಸುವ ಮೂಲಕ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲಿದ್ದೇವೆ ಎಂದರು ಮುಖಂಡರಾದ ಈಶ್ವರಪ್ಪ ಮಾತನಾಡಿ ನಾನು 89 ರಿಂದಲೂ ಪಿರಿಯಾಪಟ್ಟಣ ಕ್ಷೇತ್ರದೊಂದಿಗೆ ಒಡನಾಟದೊಂದಿಗೆ ಇದ್ದೇನೆ ಪಕ್ಷದಲ್ಲಿ ಕಾರ್ಯಕರ್ತರ ಈ ರೀತಿಯ ರಣೋತ್ಸವ ಇದೇ ಬಾರಿ ನಾನು ಕಾಣುತ್ತಿರುವುದು ಈ ಮೆರವಣಿಗೆಯನ್ನು ನೋಡುತ್ತಿದ್ದರೆ ಕಾಂಗ್ರೆಸ್ನವರ ಎದೆ ಹೊಡೆದು ಹೋಗುತ್ತದೆ ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರು ಜಗದೀಶ್ ಶೆಟ್ಟರಿಗಾಗಲಿ ಸದಾನಂದ ಗೌಡರಿಗಾಗಲಿ ಯಾರಿಗೂ ಸರ್ಕಾರದ ಬಹುಮತ ಸಿಗಲೇ ಇಲ್ಲ ಆದ್ದರಿಂದ ನಾವು ಸ್ವತಂತ್ರವಾಗಿ 120 ಕ್ಷೇತ್ರಗಳನ್ನು ಈ ಸಾರಿ ಗೆಲ್ಲಲೇ ಬೇಕು ಎರಡು ಪಕ್ಷದವರು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ ಆದರೆ ಮತವನ್ನು ಮಾತ್ರ ನಮ್ಮ ಭಾರತೀಯ ಜನತಾ ಪಕ್ಷಕ್ಕೆ ನೀಡಿ ಎಂದು ಮನವಿ ಮಾಡಿದರು.
ಈ ಹಿಂದೆ ಭಾರತೀಯ ಜನತಾ ಪಕ್ಷದಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ಗೆ ಕೇಳುವರೇ ಇರಲಿಲ್ಲ ಈಗ ಆ ಕಾಲ ಇಲ್ಲ ಟಿಕೆಟ್ ಗಾಗಿ ಪೈಪೆÇೀಟಿ ಇರುವ ಕಾರಣ ಕೇಂದ್ರ ಮಟ್ಟದ ಹಲವು ನಾಯಕರ ಕಮಿಟಿ ಈಗಾಗಲೇ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ನಿರ್ಣಯಿಸುತ್ತದೆ ಆದ್ದರಿಂದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಈಡಗಬೇಡಿ ಪಕ್ಷ ಯಾರಿಗೆ ಟಿಕೆಟ್ ನೀಡಿದರು ನೀವು ಮನಪೂರ್ವಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು ಇದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಹಾಗೂ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯು ಆದ ಸಿಎಚ್ ವಿಜಯಶಂಕರ್ ಮಾತನಾಡಿ ಕೇಂದ್ರದಲ್ಲಿ ಮೋದಿ ಸರ್ಕಾರ ಯಾವ ರೀತಿಯ ಸಾಧನೆಗಳನ್ನು ಮಾಡಿದ್ದಾರೆ ಎಂಬುದನ್ನು ಈ ದೇಶದ ಜನತೆ ಹರಿತಿದ್ದು ಮುಂದಿನ ದಿನಗಳಲ್ಲಿ ಮತ್ತೆ ದೇಶದ ಚುಕ್ಕಾನೆ ಹಿಡಿಯಲು ರಾಜ್ಯದಲ್ಲಿ ಅಧಿಕಾರ ಬರಲು ಬಿಜೆಪಿಯನ್ನು ಬೆಂಬಲಿಸಬೇಕು ಅದಕ್ಕಾಗಿ ಈ ಕ್ಷೇತ್ರದ ಜನತೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಮತ್ತೆ ಸದೃಢ ಬಿಜೆಪಿ ಸರ್ಕಾರದ ನೆಲೆಗೆ ಕಾರಣವಾಗಬೇಕು ಎಂದು ಮನವಿ ಮಾಡಿದರು
ಈ ಸಂಕಲ್ಪ ಯಾತ್ರೆಯಲ್ಲಿ ಮುಖಂಡರುಗಳಾದ ಬೆಟ್ಟದಪುರ ಸುನಿಲ್ ಸುಬ್ರಹ್ಮಣ್ಯ.ಮಹಾದೇವಯ್ಯ’ ರಾಜೇಂದ್ರ .ತುಳಸಿ ಮುನಿರಾಜೆ ಗೌಡ.ಜಿಲ್ಲಾಧ್ಯಕ್ಷ ಮಂಗಳ ಸೋಮಶೇಖರ್.ಮಾಜಿ ಶಾಸಕ ಹೆಚ್ ಸಿ ಬಸವರಾಜು.ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ರಾಜೇಗೌಡ ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ಆರ್ ಟಿ ಸತೀಶ್ ಬೆಮ್ಮತ್ತಿ ಚಂದ್ರು.ಬೆಮ್ಮತ್ತಿ ಕೃಷ್ಣ.ಪಿ ಜೆ ರವಿ .ಪ್ರವೀಣ್. ಲೋಕಪಾಲಯ್ಯ ಏಕೆ ಶೋಭ ಗೌಡ. ನಳಿನಿ ಗೌಡ.ಟಿ ರಮೇಶ್. ನಿರ್ಮಲ ಪ್ರಭಾಕರ ಆರಾಧ್ಯ ತಾತನಹಳ್ಳಿ ಹರೀಶ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು