ಕೋಲಾರ, ಏ. ೨೭- ಕೇಂದ್ರ ಮತ್ತು ರಾಜ್ಯದಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ ಸಾರ್ವಜನಿಕರಿಗೆ ಟ್ರಬಲ್ ಇಂಜಿನ್ ಸರ್ಕಾರವಾಗಿದೆ. ಸಾರ್ವಜನಿಕರ ದಿನನಿತ್ಯ ಬಳಕೆಯ ವಸ್ತುಗಳನ್ನು ಗಗನಕ್ಕೆ ಏರಿಕೆ ಮಾಡಿದೆ. ಸಾಮಾನ್ಯ ಜನರ ಬಳಕೆಯ ಗ್ಯಾಸ್, ಪೆಟ್ರೋಲ್, ವಿದ್ಯುತ್ ಸೇರಿದಂತೆ ಎಲ್ಲವೂ ದುಪ್ಪಟ್ಟು ಮಾಡಿದೆ. ಪಡಿತರ ಧ್ಯಾನ್ಯಗಳನ್ನು ಕಡಿತಗೊಳಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ರದ್ದುಗೊಳಿಸಿದೆ. ಮಕ್ಕಳ ಬಳಕೆಯ ಹಾಲು, ರೋಗಿಗಳ ಔಷಧಿಗಳ ಮೇಲೂ ಜಿ.ಎಸ್.ಟಿ. ವಿಧಿಸುವ ಮೂಲಕ ಬಡವರ ಬದುಕನ್ನು ದುಸ್ಸರಗೊಳಿಸಿದೆ ಎಂದು ಕಾಂಗ್ರೇಸ್ ಪಕ್ಷದ ರಾಜ್ಯ ಎಸ್,ಸಿ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಪಟಾಪಟ್ ನಾಗರಾಜ್ ಅರೋಪಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಕರ್ನಾಟಕವು ಸಾರ್ವಜನಾಂಗೀಯ ತೋಟವಾಗಿದ್ದನ್ನು ಸೌರ್ಹಾದತೆ ಬಾಳ್ವೆಗೆ ಬೆಂಕಿ ಹಚ್ಚಿ ಜಾತಿ ಧರ್ಮಗಳ ನಡುವೆ ಕಲಹ ಅಶಾಂತಿಯನ್ನು ಸೃಷ್ಟಿಸಿರುವ ಕೀರ್ತಿ ಬಿಜೆಪಿಗೆ ಸಲ್ಲಬೇಕಾಗಿದೆ ಎಂದು ದೂರಿದರು,
ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಕೋಲಾರ ಜಿಲ್ಲೆಯು ಕಾಂಗ್ರೇಸ್ ಪಕ್ಷದ ಭದ್ರಕೋಟೆಯಾಗಿತ್ತು ೭ ಭಾರಿ ಸತತವಾಗಿ ಕೆ.ಹೆಚ್.ಮುನಿಯಪ್ಪ ಅವರು ಸತತವಾಗಿ ಲೋಕಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದ ಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸೋಲಾಗಿದ್ದರೂ ಮುಂದೆ ಇದೇ ಸೋಲು ಗೆಲುವಿನ ಮೆಟ್ಟಿಲು ಅಗಲಿದೆ. ಪ್ರಸ್ತುತ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಕಾಂಗ್ರೇಸ್ ಕೋಲಾರ ಜಿಲ್ಲೆ ಕಾಂಗ್ರೇಸ್ ಪಕ್ಷದ ಭದ್ರ ಕೋಟೆ ಎಂಬುವುದು ಸಾಭೀತು ಪಡೆಸಲಿದೆ ಎಂದು ಹೇಳಿದರು,
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್.ಸಿ.ಘಟಕದ ಪ್ರಧಾನಕಾರ್ಯದರ್ಶಿ ವೆಂಕಟೇಶ್, ಸಂಚಾಲಕ ನವೀನ್ ಕುಮಾರ್, ಮುಖಂಡರಾದ ನಾಗೇಶ್, ರಮೇಶ್ ನಾಯ್ಕ್ ಮಿಲ್ಟ್ರಿ ರಾಮಣ್ಣ ಮುಂತಾದವರು ಉಪಸ್ಥಿತರಿದ್ದರು,