ಕೇಂದ್ರ ಮೀಸಲು ಭದ್ರತಾ ಪಡೆ ಸಿಬ್ಬಂದಿಗಳಿಂದ ಪಥ ಸಂಚಲನ

ಸೇಡಂ,ಎ,09: ವಿಧಾನಸಭೆ ಚುನಾವಣೆ ಅಂಗವಾಗಿ ಸ್ಥಳೀಯ ಪೆÇಲೀಸ್ ಮತ್ತು ಕೇಂದ್ರ ಮೀಸಲು ಭದ್ರತಾ ಪಡೆ ಸಿಬ್ಬಂದಿ ವರ್ಗದವರು ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಮುಖ್ಯರಸ್ತೆಯ, ಮೂಲಕ ರೈಲ್ವೆ ನಿಲ್ದಾಣ, ರಥ ಬೀದಿ, ಕಿರಾಣ ಬಜಾರ್ ಮುಖಾಂತರ ಪೆÇಲೀಸ್ ಠಾಣೆವರೆಗೆ ಪಥ ಸಂಚಲನ ನಡೆಸಲಾಯಿತು. ಈ ವೇಳೆಯಲ್ಲಿ ಎಸ್‍ಪಿ ಇಶಾ ಪಂತ್, ಚಿಂಚೋಳಿ ಡಿವೈಎಸ್‍ಪಿ ರುದ್ರಪ್ಪ ಉಜ್ಜನಕೊಪ್ಪ ,ಸಿಪಿಐ ಸಂದೀಪಸಿಂಗ್ ಮುರಗೋಡ,
ಫಾಲಾಕ್ಷಯ್ಯ ಹಿರೇಮಠ, ದೌಲತ್ ಎನ್.ಕೆ, ಪಿಎಸ್‍ಐ ಅರ್ಜುನಪ್ಪ ಅರಕೇರಾ,
ಚಂದ್ರಶೇಖರ ನಿರ್ಣಿ,ಸೋಮಲಿಂಗಪ್ಪ, ನಂದಿನಿ,ಬಸಲಿಂಗಪ್ಪ, ಹನುಮಂತಪ್ಪ, ನಾಗರಾಜ ಇದ್ದರು.