ಕೇಂದ್ರ ಮತ್ತ ರಾಜ್ಯ ಸರ್ಕಾರ ಮತ ಕೇಳುವ ಮೊದಲು ಸಮಸ್ಯೆ ಪರಿಹರಿಸಲಿ.


ಸಂಜೆವಾಣಿ ವಾರ್ತೆ
ಹೊಸಪೇಟೆ:ಅ,6- ಮುಂಬರುವ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೊದಲು ರೈತರ ಸಮಸ್ಯೆ ಪರಿಹರಿಸಿ ನೈತಿಕತೆಯೊಂದಿಗೆ ಮತಕೇಳಲು ಮುಂದಾಗಲಿ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ  ಜೆ.ಎಂ.ವೀರಸಂಘಯ್ಯ ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ರೈತರ ಹೋರಾಟದ ಫಲವಾಗಿ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದು ಸರಿಯಷ್ಟೆ ಆದರ ಒಬ್ಬ ಹೋರಾಟಗಾರರು, ಚಿಂತಕರನ್ನು ಒಳಗೊಳ್ಳದೆ ಸಮಿತಿ ರಚಿಸಿ ಅನುಷ್ಠಾನದ ರೂಪರೇಷೆಗಳನ್ನು ರಚಿಸಲು ಮುಂದಾಗಿರುವುದು ವಿಷಾದನೀಯ ಎಂದರು.ರಾಜ್ಯ ಹಣಕಾಸು ಖಾತೆ ಸಚಿವರು ಕಳೆದ 5 ವರ್ಷಗಳಿಂದ ಉದ್ಯಮಿಗಳ 10ಲಕ್ಷ ಕೋಟಿ ಮನ್ನಾ ಮಾಡಿರುವುದನ್ನು ಲಿಖಿತವಾಗಿ ನೀಡಿದ್ದು ರೈತರ ಸ್ಪಲ್ಪ ಮಟ್ಟಿನ ಸಾಲ‌ಮನ್ನಾ ಸಾಧ್ಯವಿಲ್ಲಾ ಎನ್ನುವುದಾದರೆ ಹೇಗೆ? ಎಂದು ಪ್ರಶ್ನಿಸಿದರು.
ಮನೆ ಮಶನೆಗೆ ಧ್ವಜ ಎನ್ನುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ರೈತರ ಹತ್ತಿ ಹೊಂದಿದ ಕಾಟನ್ ಹಾಗೂ ಖಾದಿಯ ಬದಲಾಗಿ ನೈಲನ್ ಮತ್ತು ಪಾಲಿಸ್ಟರ್ಗೆ ಅನುಮತಿಸಿದ್ದು ದುರಾದೃಷ್ಟಕರ ಇದಕ್ಕೆ ನಮ್ಮ ವಿರೋಧವಿದೆ ನಾವು ಖಾದಿ ಮತ್ತು ಕಾಟನ್ ಮಾತ್ರ ಬಳಸಲು ರೈತಸಂಘ ತೀರ್ಮಾನಿಸಿದೆ ಎಂದರು. 
ವಿಭಾಗೀಯ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ತಾಲೂಕು ಅಧ್ಯಕ್ಷ ಗಂಟಿ ಸೋಮಶೇಖರ, ಜೆ.ಎಂ.ಪ್ರಜಾಸಿಂಹ, ದಮ್ಮೂರ ಮಹೇಶ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.