ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಯೋಜನೆ ಹಾಗೂ ಅನುದಾನ ಕಡಿತಗೊಳಿಸಿ ದಲಿತರಿಗೆ ಅನ್ಯಾಯ ಮಾಡುತ್ತಿವೆ : ಶ್ರೀಕಾಂತ ತಳವಾರ

ಕಾಗವಾಡ :ನ.20:ರಾಜ್ಯದಲ್ಲಿ ದಲಿತರ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಇದನ್ನ ತಡೆಗಟ್ಟಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದು ಬೆಳಗಾವಿ ಸಂಚಾಲಕ ಶ್ರೀಕಾಂತ ತಳವಾರ ಹೇಳಿದರು.

ಶುಕ್ರವಾರ ದಿ. 19 ರಂದು ಕಾಗವಾಡ ಚೆನ್ನಮ್ಮ ಸರ್ಕಲ್‍ದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಗವಾಡ, ಅಥಣಿ ಘಟಕ ಹಮ್ಮಿಕೊಂಡ ಸಾಮಾಜಿಕ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಯೋಜನೆಗಳನ್ನ ಮೊಟಕುಗೊಳಿಸಿ ಅನುದಾನ ಕಡಿತಗೊಳಿಸಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಇದನ್ನ ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ಜನಸಾಮಾನ್ಯರ ಸ್ಥಿತಿ ಅದೋಗತಿಗೆ ತಂದಿರುವ ಈ ಸರ್ಕಾರದ ಕೆಟ್ಟ ವ್ಯವಸ್ಥೆಗೆ ಧಿಕ್ಕಾರ ಕೂಗುವ ಪರಿಸ್ಥಿತಿ ಬಂದಿದೆ. ನೀತಿಗೆಟ್ಟ ಸರ್ಕಾರ ಜನರ ರಕ್ತ ಹೀರುತ್ತಿದೆ ದಲಿತರ ವರ್ಗಗಳ ಕಡೆಗಣನೆ ಮಾಡುತ್ತಿದೆ. ಹೀಗಾಗಿ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ನಮ್ಮ ಸಂಘಟನೆ ಮಾಡುತ್ತಿದೆ ಕಾಗವಾಡದಿಂದ ಅಥಣಿ ರಸ್ತೆ ಹದಗಟ್ಟಿದ್ದು ಜನಪ್ರತಿನಿಧಿಗಳು ಯಾವದೇ ರೀತಿಯಲ್ಲಿ ಕಾರ್ಯ ಕೈಗೊಳ್ಳುತ್ತಿಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ ರಾಜಕಾರಣಿಗಳು ಇದಾವುದನ್ನ ಲೆಕ್ಕಿಸದೇ ಐಶಾರಾಮಿ ಕಾರಿನಲ್ಲಿ ತಿರುಗಾಡುತ್ತಿದ್ದಾರೆ ಅವರ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿಲ್ಲ ಬದಲಾಗಿ ರೈತರ ರಕ್ತವನ್ನ ಹಾಕಿ ತಿರುಗಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಅನೇಕ ಬೇಡಿಕೆಗಳ ಈಡೇರಿಕೆಗೆ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಮನವಿಯನ್ನು ಶಶಿ ಸಾಳವೆ ಓದಿದರು.

ಈ ವೇಳೆ ಕಾಗವಾಡ ತಾಲ್ಲೂಕಾ ಅಧ್ಯಕ್ಷ ಸಚಿನ್ ಪೂಜಾರಿ, ಅಥಣಿ ತಾಲ್ಲೂಕಾ ಅಧ್ಯಕ್ಷ ರವಿ ಕಾಂಬಳೆ, ಸಂಜಯ ತಳವಳಕರ, ಮಚ್ಚೆಂದ್ರ ಖಾಂಡೇಕರ್, ರಾಕೇಶ ಸಿಂಗೆ, ಪ್ರಲ್ಹಾದ್ ಪರಾಂಜಪೆ, ವಿಜಯ ಅಸೋದೆ, ಪ್ರಕಾಶ ದೊಂಡಾರೆ, ಜಯಪಾಲ ಬಡಿಗೇರ, ಶ್ರೀಕಾಂತ್ ಅಲಗೂರ, ಅಮಿನ್ ಜಾತಗಾರ, ಪ್ರಶಾಂತ ಕಾಂಬ್ಳೆ, ಪ್ರಕಾಶ ಮಾಂಗ, ವಿಜಯ ಭಜಂತ್ರಿ, ದೀಪಕ ಕಾಂಬಳೆ ಯಲ್ಲಪ್ಪ ಕಾಂಬ್ಳೆ, ಬಬಲು ಕಾಂಬಳೆ, ವಿನೋದ ದೇವನ, ಸುನೀಲ ಕಾಂಬಳೆ ಇದ್ದರು,